Advertisement
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಇ.ಡಿ ಪರ ಕೆಎಂ ನಟರಾಜ್ ವಾದ ಮಂಡಿಸಿದ್ದು, ಡಿಕೆ ಶಿವಕುಮಾರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.
Related Articles
Advertisement
ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದೆ. ಪಿಎಂಎಎಲ್ ಕೇಸ್ ಯಾಕೆ ಹಾಕಿದ್ದಾರೆಂದು ಗೊತ್ತಾಗ್ತಿಲ್ಲ. ಇದು ಕೇಂದ್ರ ಸರಕಾರ ರದ್ದು ಮಾಡಿರುವ ಕಾಯ್ದೆ. ರದ್ದಾಗಿರುವ ಸೆಕ್ಷನ್ ಅನ್ನು ಕೇಂದ್ರ ಸರಕಾರ ಸಿಂಧು ಮಾಡಲು ಪ್ರಯತ್ನಿಸುತ್ತಿದೆ. ಹೀಗಾಗಿ ಡಿಕೆ ಶಿವಕುಮಾರ್ ಗೆ ಜಾಮೀನು ನೀಡಲೇಬೇಕು ಎಂದು ರೋಹ್ಟಗಿ ವಾದಿಸಿದ್ದರು.
ಯಾವುದೇ ಷರತ್ತು ಬೇಕಿದ್ರೆ ಹಾಕಿ, ಆದರೆ ಡಿಕೆಶಿಗೆ ಜಾಮೀನು ಕೊಡಿ. ಈ ಪ್ರಕರಣದಲ್ಲಿ ಗರಿಷ್ಠ 7 ವರ್ಷ ಮಾತ್ರ ಶಿಕ್ಷೆಗೆ ಅವಕಾಶವಿದೆ. ಡಿಕೆಶಿಯನ್ನು ಜೈಲಿಗೆ ಕಳುಹಿಸಲು ಸೆಕ್ಷನ್ 120 ಸೇರಿಸಿದ್ದಾರೆ ಎಂದು ರೋಹ್ಟಗಿ ವಾದಿಸಿದರು.
ನ್ಯಾಯಾಂಗ ಬಂಧನದ ಅವಶ್ಯಕತೆ ಇದೆ; ಇ.ಡಿ ವಾದ
ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸಾಕ್ಷಿಗಳ ಆಧಾರದಲ್ಲಿ ವಿಚಾರಣೆ ನಡೆಯುತ್ತಿದೆ. 8.5ಕೋಟಿ ಹಣಕ್ಕೆ ಡಿಕೆಶಿ ಪರೋಕ್ಷವಾಗಿ ಹಿಡಿತ ಹೊಂದಿದ್ದಾರೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೊಪ್ಪಿಸುವ ಅವಶ್ಯಕತೆ ಇದೆ ಎಂದು ಇ.ಡಿ.ಪರ ವಕೀಲರಾದ ನಟರಾಜ್ ಪ್ರತಿವಾದ ಮಂಡಿಸಿದ್ದರು.
9 ಮಂದಿಗೆ ಸಮನ್ಸ್ ನೀಡಿ ಹೇಳಿಕೆ ಪಡೆದಿದ್ದೇವೆ. ಲೆಕ್ಕಪತ್ರವಿಲ್ಲದ 143 ಕೋಟಿ ಅಕ್ರಮ ವ್ಯವಹಾರವಾಗಿದೆ. ಡಿಕೆಶಿ 41 ಲಕ್ಷ ರೂಪಾಯಿ ಮಾತ್ರ ತನ್ನದು ಎಂದು ಹೇಳುತ್ತಿದ್ದಾರೆ. ಬೇರೆ, ಬೇರೆ ಸ್ಥಳಗಳು ಡಿಕೆ ಶಿವಕುಮಾರ್ ಹಿಡಿತದಲ್ಲಿದ್ದವು. ಡಿಕೆ ಶಿವಕುಮಾರ್ ಗೆ ಮೆಡಿಕಲ್ ಸೌಲಭ್ಯ ಒದಗಿಸಲಾಗಿದೆ. ಆರೋಪಿಗಳು ಎಲ್ಲರೂ ಸೇರಿ ಕ್ರಿಮಿನಲ್ ಒಳಸಂಚು ನಡೆಸಿದ್ದಾರೆ.
23 ವರ್ಷದ ಮಗಳು 108 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದಾರೆ ಎಂದರೆ ನಂಬಲು ಸಾಧ್ಯವೇ? ಡಿಕೆಶಿ ಬೇರೆ, ಬೇರೆ ಕಡೆ ಹಣ ಹೂಡಿಕೆ ಮಾಡಿದ್ದಾರೆ. ಕುಟುಂಬಸ್ಥರು, ಆಪ್ತರ ಮೂಲಕ ಹಣದ ವ್ಯವಹಾರ ನಡೆದಿದೆ. 20 ಬ್ಯಾಂಕ್ ಗಳಲ್ಲಿ 317 ಖಾತೆ ಮೂಲಕ ವ್ಯವಹಾರ ನಡೆಸಿದ್ದಾರೆ. ಬ್ಯಾಂಕ್ ಖಾತೆ ವಿವರ ನೀಡಲು ಇದು ವಿಚಾರಣೆಯಲ್ಲ ಎಂದು ವಾದಿಸಿದ್ದರು.
ಅರ್ಧ ಗಂಟೆಯಲ್ಲಿ ವಾದ ಮುಗಿಸಿ; ಇ.ಡಿ ವಕೀಲರಿಗೆ ಜಡ್ಜ್ ಸೂಚನೆ
ಜಾಮೀನು ನೀಡುವಿಕೆ ವಿಚಾರದಲ್ಲಿ ಒಂದು ಗಂಟೆ ವಾದ ಮಂಡಿಸಲು ಇ.ಡಿ ಪರ ವಕೀಲರಾದ ನಟರಾಜ್ ಅವಕಾಶ ಕೇಳಿದ್ದರು. ಆದರೆ ಅರ್ಧ ಗಂಟೆಯಲ್ಲಿ ವಾದ ಮಂಡನೆ ಮುಗಿಸುವಂತೆ ಜಡ್ಜ್ ಸೂಚನೆ ನೀಡಿದ್ದರು.