Advertisement

ಇಲ್ಲಿ ಹೆಣ್ಣು ಶಿಶುವೇ ಜನಿಸಿಲ್ಲ

01:12 AM Jul 23, 2019 | mahesh |

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಜಿಲ್ಲೆಯ 132 ಗ್ರಾಮಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಹೆಣ್ಣು ಮಕ್ಕಳೇ ಹುಟ್ಟಿಲ್ಲ. ಜನಿಸಿರುವ ಶಿಶುಗಳೆಲ್ಲವೂ ಗಂಡು. ಉತ್ತರಕಾಶಿಯ ಜಿಲ್ಲಾಡಳಿತ ನಡೆಸಿರುವ ಅಧ್ಯಯನದಿಂದಲೇ ಈ ಮಾಹಿತಿ ಹೊರ ಬಿದ್ದಿದೆ ಎಂದು “ಎಎನ್‌ಐ’ ವರದಿ ಮಾಡಿದೆ. ಈ ಅಧ್ಯಯನದ ಪ್ರಕಾರ ಹಿಂದಿನ ಮೂರು ತಿಂಗಳ ಅವಧಿಯಲ್ಲಿ 216 ಶಿಶುಗಳು ಜನಿಸಿ ದ್ದೆಲ್ಲವೂ, ಗಂಡು. ಈ ಅಂಶ ಜಿಲ್ಲಾಡಳಿತವನ್ನು ಆಘಾತಕ್ಕೆ ದೂಡಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ಆಶಿಶ್‌ ಚೌಹಾಣ್‌ ಹೆಣ್ಣು ಮಕ್ಕಳು ಜನಿಸದೇ ಇರುವ ಪ್ರದೇಶಗಳನ್ನು ಗುರುತಿಸಿದ್ದೇವೆ. ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆ ನಡುವೆ ಇರುವ ಅಂತರದ ಬಗ್ಗೆ ಗಮನ ಹರಿಸಲಿದ್ದೇವೆ. ಈ ಬೆಳವಣಿಗೆ ಬಗ್ಗೆ ಸಮಗ್ರ ಸಮೀಕ್ಷೆ ಮತ್ತು ಅಧ್ಯಯನ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

Advertisement

ಆಶಾ ಕಾರ್ಯಕರ್ತೆ, ಜನಪ್ರತಿನಿಧಿಗಳ ಸಭೆ
ಇಷ್ಟು ಮಾತ್ರವಲ್ಲ ಈ 132 ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿರುವ ಆಶಾ ಕಾರ್ಯಕರ್ತೆಯರು, ಜನಪ್ರತಿನಿಧಿಗಳ ಜತೆಗೆ ಕೂಡ ಜಿಲ್ಲಾಡಳಿತ ಸಭೆ ನಡೆಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ಕಲ್ಪನಾ ಠಾಕೂರ್‌ ಮೂರು ತಿಂಗಳ ಅವಧಿಯಲ್ಲಿ ಹೆಣ್ಣು ಮಕ್ಕಳು ಹುಟ್ಟಿಯೇ ಇಲ್ಲ ಎಂದಾದರೆ ಶಿಶು ಹತ್ಯೆ ನಡೆದಿರಲೇಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರ ಹೆಣ್ಣು ಮಕ್ಕಳ ಪೋಷಣೆಗಾಗಿ “ಬೇಟಿ ಬಚಾವೋ; ಬೇಟಿ ಪಡಾವೋ’ ಯೋಜನೆ ಜಾರಿಗೆ ತಂದಿರುವಂತೆಯೇ ಇಂಥ ಬೆಳವಣಿಗೆಯಾಗಿರುವುದು ಅಚ್ಚರಿ ಹುಟ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next