Advertisement
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಷ್ಟ್ರದ್ರೋಹಿಗಳ ಜತೆಗೆ ಮೊಕದ್ದಮೆ ವಾಪಸ್ ಮಾಡಿಸಿಕೊಳ್ಳುವ ದುಸ್ಥಿತಿ ನನಗೆ ಬಂದಿಲ್ಲ. ನನ್ನ ಹೆಸರನ್ನು ತೋರಿಸಿ ರಾಷ್ಟ್ರದ್ರೋಹಿಗಳಿಗೆ ರಕ್ಷಣೆ ನೀಡುವ ಅಗತ್ಯವಿಲ್ಲ. ನಾನು ಹೋರಾಟದ ಹಿನ್ನೆಲೆಯಿಂದ ಬಂದವ ಎಂದರು.
21-12-2015ರಲ್ಲಿ ಶಾಶ್ವತ ನೀರಾವರಿಗೆ ಆಗ್ರಹಿಸಿ ಬಾಗೇಪಲ್ಲಿ ಟೋಲ್ ಪ್ಲಾಜಾ ಬಳಿ ನಡೆದ ವಾಹನ ತಡೆ ಪ್ರತಿಭಟನೆಯಲ್ಲಿ ಸಿ.ಟಿ. ರವಿ ಹಾಗೂ ಹಾಲಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಭಾಗವಹಿಸಿದ್ದು ಅವರ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ಮೊಕದ್ದಮೆ ವಾಪಸ್ ಪಡೆಯುವ ಸಂದರ್ಭ ಸುಧಾಕರ್ ಹಾಗೂ ರವಿ ಇಬ್ಬರನ್ನೂ ದಾಖಲೆಯಲ್ಲಿ ಮನವಿದಾರರು ಎಂದು ಉಲ್ಲೇಖೀಸಲಾಗಿದೆ. ಆದರೆ ನಾನು ಮನವಿ ಸಲ್ಲಿಸಿಲ್ಲ ಎಂದು ರವಿ ಹೇಳಿದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.