Advertisement

Diesel: ಡೀಸೆಲ್‌ ವಾಹನಗಳಿಗೆ ಹೆಚ್ಚುವರಿ ತೆರಿಗೆ ಪ್ರಸ್ತಾಪ ಇಲ್ಲ: ಗಡ್ಕರಿ ಸ್ಪಷ್ಟನೆ

09:07 PM Sep 12, 2023 | Team Udayavani |

ನವದೆಹಲಿ: ಡೀಸೆಲ್‌ ಚಾಲಿತ ವಾಹನಗಳಿಗೆ ಹೆಚ್ಚುವರಿಯಾಗಿ ಶೇ.10 ತೆರಿಗೆ ವಿಧಿಸುವ ಅಗತ್ಯವಿದೆ ಎಂದು ಸ್ವತಃ ಹೇಳಿಕೆ ನೀಡಿದ್ದ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು, ಸ್ವಲ್ಪ ಹೊತ್ತಲ್ಲೇ ಟ್ವೀಟ್‌ ಮಾಡಿ, ಹೆಚ್ಚುವರಿ ಜಿಎಸ್‌ಟಿ ವಿಧಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Advertisement

2070ರ ಒಳಗಾಗಿ ಡೀಸೆಲ್‌ ಬಳಕೆಯಿಂದ ಇಂಗಾಲ ಹೊರ ಸೂಸುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ ಶುದ್ಧ ಇಂಧನಗಳ ಬಳಕೆ ಮಾಡಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ, ನವದೆಹಲಿಯಲ್ಲಿ ಸೊಸೈಟಿ ಆಫ್ ಇಂಡಿಯನ್‌ ಅಟೊಮೊಬೈಲ್‌ ಮ್ಯಾನ್ಯುಫ್ಯಾಕ್ಚರರ್ಸ್‌ (ಸಿಐಎಎಂ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಡೀಸೆಲ್‌ ಕಾರುಗಳ ಮೇಲೆ ಹೆಚ್ಚುವರಿ ಶೇ.10 ಜಿಎಸ್‌ಟಿ ವಿಧಿಸುವ ಬಗ್ಗೆ ಹೇಳಿದ್ದರು. ಜತೆಗೆ, “ವಾಹನ ಉತ್ಪಾದಕರು ಡೀಸೆಲ್‌ ವಾಹನಗಳ ತಯಾರಿಗೆ ನಿಲ್ಲಿಸದೇ ಇದ್ದರೆ, ಮುಂದೆ ಅದರ ಮಾರಾಟವೇ ದೊಡ್ಡ ಸವಾಲಾಗುವಷ್ಟರ ಮಟ್ಟಿಗೆ ತೆರಿಗೆ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next