Advertisement

ನೋಯ್ಡಾ: ಸ್ಮಾರ್ಟ್ ಫೋನ್ ನಲ್ಲಿ “ಆರೋಗ್ಯ ಸೇತು”ಆ್ಯಪ್ ಇಲ್ಲವೇ? ಹಾಗಾದ್ರೆ ಇದು ಅಪರಾಧ

08:04 AM May 06, 2020 | Nagendra Trasi |

ನವದೆಹಲಿ(ನೋಯ್ಡಾ): ನೋಯ್ಡಾ ಅಥವಾ ಗ್ರೇಟರ್ ನೋಯ್ಡಾದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡುವಾಗ ಸ್ಮಾರ್ಟ್ ಪೋನ್ ನಲ್ಲಿ ಆರೋಗ್ಯ ಸೇತು ಆ್ಯಪ್ ಇಲ್ಲದಿದ್ದರೆ ಅದನ್ನು ಕೋವಿಡ್ ನಿಯಮದ ಉಲ್ಲಂಘನೆ ಎಂದು ಪರಿಗಣಿಸಿ ಇದನ್ನು ಅಪರಾಧ ಎಂದು ಪರಿಗಣಿಸಲಾಗುವುದು ಎಂಬುದಾಗಿ ನೋಯ್ಡಾದ ಪೊಲೀಸರು ನೂತನ ನಿಯಮಾವಳಿ ಬಿಡುಗಡೆಗೊಳಿಸಿದ್ದಾರೆ.

Advertisement

ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಅಥವಾ ಮುಖಕ್ಕೆ ಮಾಸ್ಕ್ ಧರಿಸದೇ ಇದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಪ್ರದೇಶ ಗೌತಮ್ ಬುದ್ಧ ನಗರ್ ಪೊಲೀಸರು ತಿಳಿಸಿದ್ದಾರೆ.

ಕೋವಿಡ್ 19 ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಆರೋಗ್ಯ ಸೇತು. ಜನರಿಗೆ ಸುಲಭವಾಗಿ ಕೋವಿಡ್ ಕುರಿತು ಮಾಹಿತಿ ಹಾಗೂ ಕೋವಿಡ್ 19 ಬಗ್ಗೆ ಮಾಹಿತಿ ಸಂಗ್ರಹಿಸಲು ಕೇಂದ್ರ ಈ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು.

ಮೇ 17ರವರೆಗೆ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ಕಾನೂನು ಬಾಹಿರ ಇದಕ್ಕಾಗಿ 144 ಸೆಕ್ಷನ್ ಮುಂದುವರಿಸಲಾಗಿದೆ.ಕೋವಿಡ್ 19 ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ದೇಶಾದ್ಯಂತ ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next