Advertisement

“ಗ್ರಾಮಾಯಣ’ಚಿತ್ರದ ನಿರ್ಮಾಪಕ ಎನ್.ಎಲ್‌.ಎನ್‌. ಮೂರ್ತಿ ಇನ್ನಿಲ್ಲ

07:53 AM Jul 04, 2020 | Lakshmi GovindaRaj |

ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್‌ ರಾಜ್‌ಕುಮಾರ್‌ ನಟಿಸುತ್ತಿರುವ “ಗ್ರಾಮಾಯಣ’ ಚಿತ್ರದ ನಿರ್ಮಾಪಕ ಎನ್.ಎಲ್‌.ಎನ್‌. ಮೂರ್ತಿ (39) ಶುಕ್ರವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.  ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

Advertisement

ಮೃತರ ತಾಯಿ ಸಹ ಗುರುವಾರವಷ್ಟೇ ನಿಧನರಾಗಿದ್ದು, ಮೃತ ಮೂರ್ತಿ, ಪತ್ನಿ ಆರ್‌. ಲತಾ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಶನಿವಾರ ಬನಶಂಕರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ರಂಗಭೂಮಿಯಲ್ಲೂ ಸಕ್ರಿಯರಾಗಿದ್ದ ಮೂರ್ತಿ ಸಿನಿಮಾ ರಂಗದ ಮೇಲಿನ ಆಸಕ್ತಿಯಿಂದಾಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು.‌ ಹಾಗೂ “ಗ್ರಾಮಾಯಣ’ ಚಿತ್ರದ ಚಿತ್ರೀಕರಣ ಆರಂಭಿಸುವ ತಯಾರಿಯನ್ನೂ ಮಾಡಿಕೊಂಡಿದ್ದರು.

ಅಲ್ಲದೇ “ಇತ್ಯರ್ಥ’ ಚಿತ್ರಕ್ಕೂ ಮೂರ್ತಿ ಬಂಡವಾಳ ಹೂಡಿದ್ದರು. ಈ ಚಿತ್ರವನ್ನು ಎ.ಜಿ. ಶೇಷಾದ್ರಿ ನಿರ್ದೇಶನ ಮಾಡಿದ್ದು, ಚಿತ್ರ ಬಿಡುಗಡೆಯಾಗುವ ಹಂತದಲ್ಲಿತ್ತು. ಇನ್ನು ಮೂರ್ತಿ ನಿಧನಕ್ಕೆ ನಟ ವಿನಯ್ ರಾಜ್ ಕುಮಾರ್ ಸಂತಾಪ ಸೂಚಿಸಿದ್ದು, ಒಳ್ಳೇಯ ಚಿತ್ರ ನಿರ್ಮಾಣದ ಕನಸು ಕಂಡಿದ್ದ ಮೂರ್ತಿಯವರ ಅಕಾಲಿಕ ಸಾವು ದುಃಖತಂದಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next