Advertisement

ಎ. 8-11: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

12:24 PM Apr 06, 2019 | keerthan |

ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯ ವತಿಯಿಂದ ಪ್ರತಿ ವರ್ಷ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೂರನೇ ಆವೃತ್ತಿಯು ಎ. 8 ರಿಂದ 11ರ ವರೆಗೆ ನಗರದ ಭಾರತ್‌ ಮಾಲ್‌ನ ಬಿಗ್‌ ಸಿನಿಮಾಸ್‌ನಲ್ಲಿ ನಡೆಯಲಿದೆ.

Advertisement

ನಿರ್ದೇಶಕ ಪಿ. ಶೇಷಾದ್ರಿ ಉದ್ಘಾಟಿ ಸಲಿದ್ದಾರೆ. ಎನ್‌ಐಎಫ್‌ಎಫ್‌, ಖ್ಯಾತ ನಿರ್ದೇಶ‌ಕರ ಮೂಕಜ್ಜಿಯ ಕನಸುಗಳು ಚಿತ್ರ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ.

ಈ ಮಾ ಯು (ಮಲೆಯಾಳಂ), ಕಾಲ (ತಮಿಳು), ಪಡ್ಡಾಯಿ (ತುಳು), ಅಕ್ಟೋಬರ್‌ (ಹಿಂದಿ), ತುಂಬ್ಬದ್‌ (ಹಿಂದಿ), ರೇಡು (ಮರಾಠಿ), ದಿಥಿ (ಮರಾಠಿ), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು (ಕನ್ನಡ), ಅಭ್ಯಕೊ¤ (ಬಂಗಾಳಿ). ಚಿತ್ರೋತ್ಸವದ ಸಮಾಪ್ತಿ ಚಿತ್ರವಾಗಿ ಕುಂಬಲಾಂಗಿ (ಮಲೆಯಾಳಂ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಈ ಬಾರಿ ಹಿಂದಿ, ತುಳು, ಕನ್ನಡ, ಮಲಯಾಳ, ಉರ್ದು, ಬಂಗಾಲಿ, ಮರಾಠಿ, ತೆಲುಗು, ತಮಿಳು, ಪೋರ್ಚುಗೀಸ್‌ ಮತ್ತು ಫ್ರೆಂಚ್‌ ಭಾಷೆಯ ಚಿತ್ರಗಳು ಸೇರಿದಂತೆ 70 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಾಲ್ಕು ದಿನಗಳ ಅವಧಿಯಲ್ಲಿ ಭಾರತ್‌ ಸಿನಿಮಾಸ್‌ನ ಮೂರು ಪರದೆಗಳನ್ನು ಪ್ರತ್ಯೇಕವಾಗಿ ಚಿತ್ರೋತ್ಸವಕ್ಕೆ ಮೀಸಲಿಡಲಾಗಿದೆ.

ಸಂವಾದಕ್ಕೆ ಅವಕಾಶ
ಅತಿಥಿಗಳಾಗಿ ನಿರ್ದೇಶಕ ನಟ ರಿಷಭ್‌ ಶೆಟ್ಟಿ, ಸುಮಿತ್ರಾ ಭಾವೆ, ವೈದೇಹಿ, ವೀಣಾ ಬಕ್ಷಿ, ಅಭಯಸಿಂಹ, ಅಂಜಲಿ ಪಾಟೀಲ್‌, ಜಯಪ್ರಕಾಶ್‌ ರಾಧಾಕೃಷ್ಣನ್‌, ಸಂಚಾರಿ ವಿಜಯ್‌, ಅಜಾಜ್‌ ಖಾನ್‌ ಮತ್ತು ಪ್ರಿಯಾ ಕೃಷ್ಣಸ್ವಾಮಿ ಆಗಮಿಸಲಿದ್ದಾರೆ. ಪ್ರತಿ ಚಿತ್ರ ಪ್ರದರ್ಶನದ ಬಳಿಕ ಆಯಾ ಚಿತ್ರದ ನಿರ್ಮಾಪಕರ ಜತೆ ಸಂವಾದಕ್ಕೆ ಅವಕಾಶ ಇರುತ್ತದೆ.

Advertisement

ರಾಷ್ಟ್ರಪ್ರಶಸ್ತಿ ಪಡೆದ ಚಿತ್ರವಿಮ ರ್ಶಕ ಮನು ಚಕ್ರವರ್ತಿ ಅವರು ಪಿ. ಶೇಷಾದ್ರಿ ಅವರ ಜತೆ, “ಪಠ್ಯವಾಗಿ ಚಿತ್ರ: ಶಿವರಾಮಕಾರಂತರ ಬರಹ ಗಳನ್ನು ಸಿನೆಮಾ ಮೂಲಕ ಅರ್ಥ ಮಾಡಿಕೊಳ್ಳುವುದು’ ಎಂಬ ವಿಚಾರದ ಬಗ್ಗೆ ಎ. 8ರಂದು ಸಂಜೆ 5.15ಕ್ಕೆ ಸಂವಾದ ನಡೆಸಿಕೊಡಲಿದ್ದಾರೆ. ಎ. 9ರಂದು ಸಂಜೆ 7 ಗಂಟೆಗೆ ಖ್ಯಾತ ಚಿತ್ರ ವಿಮರ್ಶಕರಾದ ಭಾರದ್ವಾಜ್‌ ರಂಗನ್‌, ಸೌಮ್ಯಾ ರಾಜೇಂದ್ರನ್‌ ಮತ್ತು ರೋಶನ್‌ ನಾಯರ್‌ ಅವರನ್ನೊಳಗೊಂಡ ಗುಂಪು ಚರ್ಚೆಯೂ ಇರುತ್ತದೆ. ಈ ಗೋಷ್ಠಿಯಲ್ಲಿ ಖ್ಯಾತ ಚಿತ್ರ ನಿರ್ಮಾಪಕ ಅಜೀಜ್‌ ಖಾನ್‌ ನಿರ್ವಹಿಸಲಿದ್ದಾರೆ.

ಎಲ್ಲ ಚಿತ್ರಗಳನ್ನು ಉಚಿತವಾಗಿ ವೀಕ್ಷಿಸಲು ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಮೊದಲು ಬಂದವರಿಗೆ ಮೊದಲು ಆದ್ಯತೆಯಂತೆ ಪ್ರವೇಶ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next