ಸುರತ್ಕಲ್ : ಎನ್ ಐ ಟಿ ಕೆ ಕ್ಯಾಂಪಸ್ ನ ಹುಲ್ಲಿಗೆ ಬೆಂಕಿ ಹತ್ತಿಕೊಂಡಿದ್ದು ಕದ್ರಿ ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿದೆ.
Advertisement
ಅಕ್ಕಪಕ್ಕ ಯಾವುದೇ ಕಟ್ಟಡಗಳು ಇಲ್ಲದಿರುವುದರಿಂದ ಹೆಚ್ಚಿನ ಅನಾಹುತವಾಗಿಲ್ಲ.ಒಣಗಿದ ಹುಲ್ಲುಗಳಿಗೆ ಬೆಂಕಿ ಹತ್ತಿಕೊಂಡಿದೆ. ಸಮುದ್ರದಿಂದ ಕೆಲವೇ ಅಂತರದಲ್ಲಿರುವ ಕಾರಣ ಜೋರಾಗಿ ಗಾಳಿ ಬೀಸುತ್ತಿದ್ದು ಬೆಂಕಿ ಕೆನ್ನಾಲಿಗೆ ಹರಡುತ್ತಿದೆ.
ಅಗ್ನಿಶಾಮಕ ಸಿಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.