Advertisement

ಇಂದು ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ

12:50 AM Aug 10, 2022 | Team Udayavani |

ಪಾಟ್ನಾ: ನಿತೀಶ್‌ ಕುಮಾರ್ ಅವರು 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಬುಧವಾರ ಅಪರಾಹ್ನ 2ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Advertisement

ಉಪಮುಖ್ಯಮಂತ್ರಿಯಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರಮಾಣ ಸ್ವೀಕರಿಸಲಿದ್ದಾರೆ. ಜೆಡಿಯು ಮತ್ತು ಆರ್‌ಜೆಡಿಗೆ ತಲಾ 14 ಸಚಿವ ಸ್ಥಾನಗಳು ಸಿಗಲಿವೆ. ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್‌ಗೂ 3 ಸಚಿವ ಸ್ಥಾನಗಳು ಲಭಿಸಲಿವೆ ಎನ್ನಲಾಗಿದೆ. ಇನ್ನು, ಬಿಜೆಪಿ ಬುಧವಾರ ಬೆಳಗ್ಗೆ 10 ಗಂಟೆಗೆ ತನ್ನ ಸಂಸದರು, ಶಾಸಕರು ಹಾಗೂ ಎಂಎಲ್‌ಸಿಗಳ ಸಭೆ ಕರೆದಿದೆ.

ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡುವ ಬಿಜೆಪಿಯ ಅಜೆಂಡಾ ಬಿಹಾರದಲ್ಲಿ ಜಾರಿಯಾಗಲು ನಾವು ಬಿಡುವುದಿಲ್ಲ. ಬಿಜೆಪಿ ಜತೆಗೆ ಕೈಜೋಡಿಸಿದ ಎಲ್ಲ ಪಕ್ಷಗಳನ್ನೂ ಬಿಜೆಪಿ ನಾಶ ಮಾಡಿರುವುದನ್ನು ಇತಿಹಾಸವೇ ಹೇಳುತ್ತದೆ.
– ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next