ಪಾಟ್ನಾ: ಬಿಹಾರದಲ್ಲಿ ಗಂಗಾ ನದಿಯ ಮೇಲೆ ನಿರ್ಮಾಣ ಹಂತದ ಸೇತುವೆ ಕುಸಿದ ಒಂದು ದಿನದ ನಂತರ, ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಸೇತುವೆ ಕಳೆದ ವರ್ಷವೂ ಕುಸಿದಿತ್ತು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ “ಸೇತುವೆಯನ್ನು ಸರಿಯಾಗಿ ನಿರ್ಮಿಸಲಾಗುತ್ತಿಲ್ಲ ಮತ್ತು ಅದಕ್ಕಾಗಿಯೇ ಎ 2022 ರಿಂದ ಇದು ಎರಡು ಬಾರಿ ಕುಸಿದಿದೆ. ಇದು ಗಂಭೀರ ವಿಷಯವಾಗಿದೆ. ಸಂಬಂಧಪಟ್ಟ ಇಲಾಖೆ ಈಗಾಗಲೇ ಅದರ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದರು.
2014ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿ ಇದುವರೆಗೂ ಏಕೆ ಪೂರ್ಣಗೊಂಡಿಲ್ಲ ಎಂದು ಪ್ರಶ್ನಿಸಿದರು.”ಏಕೆ ವೇಳಾಪಟ್ಟಿಯು ಹಿಂದೆ ಬೀಳುತ್ತಿದೆ? ನಾನು ಈ ಬಗ್ಗೆಯೂ ತನಿಖೆ ನಡೆಸುವಂತೆ ಸಂಬಂಧಿಸಿದ ಇಲಾಖೆಯನ್ನು ಕೇಳಿದ್ದೇನೆ. ಉಪಮುಖ್ಯಮಂತ್ರಿ ಕೂಡ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ,” ಎಂದು ನಿತೀಶ್ ಹೇಳಿದರು.
2014 ರಿಂದ ನಿರ್ಮಿಸಲಾಗುತ್ತಿರುವ 3.16 ಕಿಮೀ ಸೇತುವೆಯು 14 ತಿಂಗಳುಗಳ ಒಳಗೆ ಎರಡು ಬಾರಿ ಕುಸಿದಿದೆ. ಮೊದಲನೆಯದು ಭಾಗಲ್ಪುರದ ಸುಲ್ತಂಗಂಜ್ ಭಾಗದಲ್ಲಿ ಎ 2022 ರಲ್ಲಿ ಮತ್ತು ಎರಡನೇ ಬಾರಿಗೆ ಭಾನುವಾರ ಸಂಜೆ ಖಗಾರಿಯಾ ಭಾಗದಲ್ಲಿ ಕುಸಿದಿದೆ.