Advertisement

ಬಿಹಾರದ ಈ ಗ್ರಾಮಕ್ಕೂ ಶಾ ಭೇಟಿ ನೀಡಿ ನೋಡಲಿ: ಸಿಎಂ ನಿತೀಶ್ ಸವಾಲು

09:54 PM Oct 02, 2022 | Team Udayavani |

ಪಾಟ್ನಾ: ”ರಾಜ್ಯಕ್ಕೆ ಭೇಟಿ ನೀಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ,ನಾವು ಜಯಪ್ರಕಾಶ್ ನಾರಾಯಣ್ ಅವರ ತತ್ವಗಳನ್ನು ಉಳಿಸಿಕೊಂಡಿದ್ದೇವೆ ಅವರ ಗ್ರಾಮವೂ ಚೆನ್ನಾಗಿದೆ” ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟಾಂಗ್ ನೀಡಿದ್ದಾರೆ.

Advertisement

ಭಾನುವಾರ ಶಾ ಅವರ ಬಿಹಾರ ಭೇಟಿಯ ಕುರಿತು ಮಾತನಾಡಿದ ನಿತೀಶ್, ”ರಾಜ್ಯ ಸರಕಾರ ಇಲ್ಲಿಯವರೆಗೆ ಏನು ಮಾಡಿದೆ ಎಂಬುದನ್ನು ನೋಡಲು ಶಾ ಅವರು ಜೆಪಿ ಅವರ ಗ್ರಾಮಕ್ಕೆ ಭೇಟಿ ನೀಡಬೇಕು” ಎಂದು ಸವಾಲೆಸೆದಿದ್ದಾರೆ.

ಇದನ್ನೂ ಓದಿ : ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

ಬಿಹಾರದ ಸಿತಾಬ್ ದಿಯಾರಾದಲ್ಲಿ ಅಕ್ಟೋಬರ್ 11 ರಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಶಾ ಭಾಗವಹಿಸಲಿದ್ದಾರೆ. 12 ಗಂಟೆಗೆ ಶಾ ಸಿತಾಬ್ ದಿಯಾರಾಗೆ ಆಗಮಿಸಲಿದ್ದಾರೆ. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಲು. ಜಯಪ್ರಕಾಶ್ ನಾರಾಯಣ್ ಅವರನ್ನು ಸನ್ಮಾನಿಸುವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕ್ವಿಟ್ ಇಂಡಿಯಾ ಚಳವಳಿಯ ಪ್ರಮುಖ ನಾಯಕ ‘ಲೋಕನಾಯಕ’ ಜಯಪ್ರಕಾಶ್ ನಾರಾಯಣ್, 1970ರ ದಶಕದ ಮಧ್ಯಭಾಗದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧದ ಹೋರಾಟದ ನಾಯಕತ್ವದಲ್ಲಿ ಹೆಸರುವಾಸಿಯಾಗಿದ್ದರು, ಅವರ ಪದಚ್ಯುತಿಗೆ ಅವರು “ಸಂಪೂರ್ಣ ಕ್ರಾಂತಿಗೆ” ಕರೆ ನೀಡಿದ್ದರು. ಅವರ ನಾಯಕತ್ವದಲ್ಲಿ, ಜನತಾ ಪಕ್ಷ ಚುನಾಯಿತವಾಗಿತ್ತು. ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದ ಮೊದಲ ಕಾಂಗ್ರೆಸ್ಸೇತರ ಪಕ್ಷವಾಗಿತ್ತು. 1999 ರಲ್ಲಿ, ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next