ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 25 ರಿಂದ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಯು ನಿತೀಶ್‌ಕುಮಾರ್ ಬಣ ತೀರ್ಮಾನಿಸಿದ್ದು, ಬಿಜೆಪಿ ಜತೆ ಮೈತ್ರಿ ಇಲ್ಲದೆ ಸ್ವತಂತ್ರವಾಗಿಯೇ ಕಣಕ್ಕಿಳಿಯಲು ನಿರ್ಧರಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ಮುಂದೆ ರಾಜ್ಯದಲ್ಲಿ ಜೆಡಿಯು ಸಹಕಾರವಿಲ್ಲದೆ ಯಾರೂ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು. ದಾವಣಗೆರೆ, ಧಾರವಾಡ, ಕೋಲಾರ,
ಬೆಂಗಳೂರು ನಗರ ಸೇರಿ ರಾಜ್ಯದ 30 ಕ್ಷೇತ್ರಗಳ ಪಟ್ಟಿ ಸಿದಟಛಿಪಡಿಸಿ ಏಪ್ರಿಲ್ 11 ರಂದು ಕರ್ನಾಟಕಕ್ಕೆ ಆಗಮಿಸಲಿರುವ ರಾಷ್ಟ್ರೀಯ ಅಧ್ಯಕ್ಷ ನಿತೀಶ್‌ಕುಮಾರ್ ಅವರ ಒಪ್ಪಿಗೆ ಪಡೆದು ಪಟ್ಟಿ ಪ್ರಕಟಿಸಲಾಗುವುದು.
ನಿತೀಶ್ ಕುಮಾರ್ ಅವರು ಬೆಂಗಳೂರಿನಲ್ಲಿ ಗಣ್ಯರೊಂದಿಗೆ ಸಂವಾದ ಸಹ ನಡೆಸಲಿದ್ದಾರೆ ಎಂದರು. ನಾನು ಚೆನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ. ಜೆಡಿಯು ಶರದ್ ಯಾದವ್ ಬಣ ಬಿಜೆಪಿ ಸೋಲಿಸಬೇಕೆಂದು ಪಣ ತೊಟ್ಟಿದ್ದರೆ ನಮ್ಮನ್ನು ಬೆಂಬಲಿಸಲಿ ಎಂದರು. ರೈತ ಮುಖಂಡ ಕಡಿದಾಳು ಶಾಮಣ್ಣ ಸೇರಿ ಹಲವು ಸಂಘಟನೆಗಳು, ಗಣ್ಯರು ತಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳಿದರು.