Advertisement

ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಜೈಲಿನಲ್ಲಿದ್ದುಕೊಂಡೇ ಕೃತ್ಯವೆಸಗಿದ ಪುತ್ತೂರಿನ ಜಯೇಶ್

10:48 AM Jan 15, 2023 | Suhan S |

ಮುಂಬಯಿ/ ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಎನ್ನುವುದು ತಿಳಿದು ಬಂದಿದೆ.

Advertisement

ಈ ಕುರಿತು ಪ್ರಕರಣ ದಾಖಲಿಸಿಕೊಂಡು ನಾಗ್ಪುರ ಪೊಲೀಸರು ತನಿಖೆ ಸಚಿವರಿಗೆ ಜೀವ ಬೆದರಿಕೆಯನ್ನು ಹಾಕಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ದಕ್ಷಿಣ ಕನ್ನಡ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದು ಬಂದಿದೆ.

ಜೈಲಿನಲ್ಲಿ ಅಕ್ರಮವಾಗಿ ಫೋನ್‌ ಬಳಸಿ ಜಯೇಶ್‌ ಕುಮಾರ್ ಈ ಕೃತ್ಯವನ್ನು ಎಸಗಿದ್ದಾನೆ. ನಾಗ್ಪುರ ಪೊಲೀಸರು ತನಿಖೆಗಾಗಿ ಬೆಳಗಾವಿಗೆ ತೆರಳಿದ್ದಾರೆ. ಆರೋಪಿಯನ್ನು ಪ್ರೊಡಕ್ಷನ್ ರಿಮಾಂಡ್‌ ನೀಡಲು ಕೇಳಿಕೊಂಡಿದ್ದೇವೆ ಎಂದು ನಾಗ್ಪುರ ಪೊಲೀಸ್ ಆಯುಕ್ತರು ಅಮಿತೇಶ್ ಕುಮಾರ್ ಹೇಳಿದ್ದಾರೆ.  ‌

ಜಯೇಶ್‌ ಕುಮಾರ್‌ ಪುತ್ತೂರಿನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದಾನೆ. ಈ ಹಿಂದೆ ಜೈಲಿನಲ್ಲೇ ಇದ್ದುಕೊಂಡು ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೂ ಜೀವ ಬೆದರಿಕೆ ಕರೆಯನ್ನು ಮಾಡಿದ್ದ.  ಆರೋಪಿಯ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಈ ಡೈರಿಯಲ್ಲಿ ನಿನ್ನೆ ಸಚಿವರ ಕಚೇರಿಗೆ ಹೇಳಿದ್ದ ನಂಬರ್‌ ಸೇರಿದಂತೆ ಹಲವು ನಂಬರ್‌ ಗಳಿವೆ. ಸದ್ಯ ಡೈರಿ ವಶಕ್ಕೆ ಪಡೆದಿದ್ದು, ಮೊಬೈಲ್‌ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಜಯೇಶ್ ಸಚಿವರ ಕಚೇರಿಗೆ ಶನಿವಾರ ಬೆಳಿಗ್ಗೆ 11:25, 11:32 ಹಾಗೂ 12:30ಕ್ಕೆ ಮೂರು ಬಾರಿ ಕರೆ ಮಾಡಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯನೆಂದು 100 ಕೋಟಿ ರೂ.ಗೆ ಬೇಡಿಕೆಯಿಟ್ಟದ್ದ.  ಇದಾದ ಬಳಿಕ ಸಚಿವರ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿತ್ತು. ‌

Advertisement

ಕೊಲ್ಲಾಪುರ ಟೆರರಿಸ್ಟ್‌ ವಿರೋಧಿ ದಳ ನಿನ್ನೆ ಜೈಲಿಗೆ ಭೇಟಿ ನೀಡಿತ್ತು. ನಾಗ್ಪುರ ಪೊಲೀಸರು ಬಂದು ತನಿಖೆ ನಡೆಸಿದ ಬಳಿಕವಷ್ಟೇ ಇನ್ನಷ್ಟು ಸತ್ಯಗಳು ಹೊರಬರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next