ಮಂಡ್ಯ: ದಶಪಥ ರಸ್ತೆಯು ವಿಶ್ವ ದರ್ಜೆಯ ರಾಷ್ಟ್ರೀಯ ಹೆದ್ದಾರಿಯಾಗಿದೆ, ಬೆಂಗಳೂರು ಮೈಸೂರು ಅಭಿವೃದ್ದಿಗೆ ಅತೀದೊಡ್ಡ ಕೊಡುಗೆ ನೀಡಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಮಂಡ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು- ಬೆಂಗಳೂರು ನಡುವೆ ಪ್ರಯಾಣ ಸಮಯದ ಉಳಿತಾಯದ ಜೊತೆಗೆ ಹಲವು ರೀತಿಯಲ್ಲಿ ಅನುಕೂಲವಾಗಲಾಗಿದೆ. ರಸ್ತೆ ನಿರ್ಮಾಣಕ್ಕೆ 400 ಕೋಟಿ ರೂ ರೈತರ ಭೂಮಿಗೆ ಪರಿಹಾರ ನಿಡಲಾಗಿದೆ. ಅತ್ಯಂತ ಉತ್ತಮವಾಗಿ ರಸ್ತೆ ನಿರ್ಮಾಣವಾಗಿದೆ ಎಂದು ಹೇಳಿದರು.
ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಹಕಾರ ಸ್ಮರಣೀಯ. ಲೋಕಸಭಾ ಸದಸ್ಯರು ಹಿಂದಿನ ಕ್ರಿಯೋ ಯೋಜನೆ ಮಾರ್ಪಾಡು ಮಾಡಿಸಿ ಇನ್ನಷ್ಟು ಉತ್ತಮಗೊಳಿಸಲು ಪರಿಶ್ರಮ ವಹಿಸಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ತುಮ್ ಖಾವೋ, ಮುಜೆ ಬಿ ಖಿಲಾವೋ ; ಪ್ರಧಾನಿ ಮೋದಿ ವಿರುದ್ಧ ಸಿದ್ದು ಟ್ವೀಟ್ ಬಾಣಗಳು
Related Articles
ರಾಷ್ಟ್ರೀಯ ಹೆದ್ದಾರಿ 209 ತಮಿಳುನಾಡು ಕೇರಳ ರಾಜ್ಯಗಳ ಸಂಪರ್ಕ ಬೆಸೆಯುವ ಜೊತೆಗೆ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.
ದಶಪಥ ರಸ್ತೆಯಿಂದ ಈ ವಲಯದ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿದೆ ಸ್ಥಳೀಯ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು. ದೇಶದ ಪ್ರಮುಖ ನಗರಗಳನ್ನು ಜೊಡಿಸುವ ಅನೇಕ ಕಾಮಗಾರಿಗಳು ಉತ್ಕೃಷ್ಟ ಗುಣ ಮಟ್ಟದಿಂದ ನಡೆಯುತ್ತಿದೆ ಎಂದು ಅವರು ವಿವರಿಸಿದರು