Advertisement

ರಫ್ತು ಸಿದ್ಧತಾ ಸೂಚ್ಯಂಕ: ರಾಜ್ಯಕ್ಕೆ 5ನೇ ಸ್ಥಾನ

01:15 AM Aug 27, 2020 | mahesh |

ಹೊಸದಿಲ್ಲಿ: ನೀತಿ ಆಯೋಗದ ರಫ್ತು ಸಿದ್ಧತಾ ಸೂಚ್ಯಂಕ- 2020ರ ಶ್ರೇಯಾಂಕದಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿದೆ. ಕೇಂದ್ರ ಸರಕಾರದ ಥಿಂಕ್‌ ಟ್ಯಾಂಕ್‌ ಬಿಡುಗಡೆ ಮಾಡಿರುವ ಟಾಪ್‌ 10 ಪಟ್ಟಿಯಲ್ಲಿ ಗುಜರಾತ್‌ ಮೊದಲ ಸ್ಥಾನದಲ್ಲಿದ್ದರೆ ಅನಂತರದಲ್ಲಿ, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳ ಸ್ಥಾನ ಪಡೆದಿವೆ. ಇವೆಲ್ಲವೂ ಕರಾವಳಿ ತೀರ ಹೊಂದಿರುವ ರಾಜ್ಯಗಳಾಗಿವೆ.

Advertisement

ಭೂಗಡಿ ಹೊಂದಿರುವ ರಾಜ್ಯಗಳಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ, ಹಿಮಾಲಯದ ರಾಜ್ಯಗಳಲ್ಲಿ ಉತ್ತರಾಖಂಡ, ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿಲ್ಲಿ ಮೊದಲ ಸ್ಥಾನ ಪಡೆದಿವೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ವಿವಿಧ ರಾಜ್ಯಗಳ ರಫ್ತು ಪಾಲು ಆಧರಿಸಿ, ನೀತಿ ಆಯೋಗ ಈ ಪಟ್ಟಿ ತಯಾರಿಸುತ್ತದೆ.  ವರದಿ ಬಿಡುಗಡೆ ಮಾಡಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌, “ಜಿಡಿಪಿ ಮತ್ತು ವಿಶ್ವ ವ್ಯಾಪಾರದಲ್ಲಿ ರಫ್ತು ಪಾಲನ್ನು ಹೆಚ್ಚಿಸಲು ರಾಜ್ಯಗಳು ಇನ್ನಷ್ಟು ಶ್ರಮಿಸಬೇಕಿದೆ. ಮುಂದೆ ಭಾರತದ ರಫ್ತು ಪಾಲನ್ನು ದ್ವಿಗುಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next