Advertisement

ನಿತ್ಯಾನಂದನಿಗೆ ಭಾರತದಿಂದ ಕಿರುಕುಳ?; ಸ್ಪಷ್ಟನೆ ನೀಡಿದ ವಿಜಯಪ್ರಿಯಾ ನಿತ್ಯಾನಂದ

10:55 AM Mar 03, 2023 | Team Udayavani |

ಕೈಲಾಸ: ಹಿಂದೂ ಧರ್ಮದ ಪುರಾತನ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ವಿಜಯಪ್ರಿಯಾ ನಿತ್ಯಾನಂದ ಹೇಳಿಕೆಗೆ ಇದೀಗ ಸ್ಪಷ್ಟೀಕರಣ ನೀಡಿದ್ದು, “ಹಿಂದೂ ವಿರೋಧಿ” ಅಂಶಗಳ ವಿರುದ್ಧ ಕ್ರಮಕ್ಕೆ ಕರೆ ನೀಡಿದ್ದಾರೆ.

Advertisement

ಫೆಬ್ರವರಿ 24 ರಂದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯು ‘ಕೈಲಾಸ ಯುನೈಟೆಡ್ ಸ್ಟೇಟ್ಸ್‌ ನ ಶಾಶ್ವತ ರಾಯಭಾರಿ’ ಆಗಿ ವಿಜಯಪ್ರಿಯಾ ಆಯೋಜಿಸಿದ್ದ ಚರ್ಚೆಯಲ್ಲಿ, ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ಅವರ ತವರು ದೇಶದಿಂದ ನಿಷೇಧಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ: ಕೇಂಬ್ರಿಡ್ಜ್ ವಿ.ವಿ ಭಾಷಣದಲ್ಲಿ ರಾಹುಲ್

‘ವಿಶ್ವಸಂಸ್ಥೆಯಲ್ಲಿ ತಮ್ಮ ಹೇಳಿಕೆಯನ್ನು ಕೆಲವು ಹಿಂದೂ ವಿರೋಧಿ ಮಾಧ್ಯಮಗಳಿಂದ ತಪ್ಪಾಗಿ ಅರ್ಥೈಸಲಾಗಿದೆ, ಉದ್ದೇಶಪೂರ್ವಕವಾಗಿ ತಿರುಚಲಾಗಿದೆ’ ಎಂದು ವಿಜಯಪ್ರಿಯಾ ನಿತ್ಯಾನಂದ ಹೇಳಿದರು.

“ಎಸ್ಪಿಎಚ್ ಭಗವಾನ್ ನಿತ್ಯಾನಂದ ಪರಮಶಿವಂ ಅವರು ತವರಿನಲ್ಲಿ ಕೆಲವು ಹಿಂದೂ ವಿರೋಧಿ ಅಂಶಗಳಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ನಾನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸವು ಭಾರತವನ್ನು ಉನ್ನತ ಗೌರವದಿಂದ ಪರಿಗಣಿಸುತ್ತದೆ ಮತ್ತು ಭಾರತವನ್ನು ತನ್ನ ಗುರುಪೀಠವೆಂದು ಗೌರವಿಸುತ್ತದೆ” ಎಂದು ವಿಜಯಪ್ರಿಯಾ ನಿತ್ಯಾನಂದ ಸ್ಪಷ್ಟನೆ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next