Advertisement

ನಿತ್ಯಾನಂದ ಮಧುರೈ ಪ್ರವೇಶ ನಿರ್ಬಂಧ

12:00 PM Oct 12, 2017 | Team Udayavani |

ಚೆನ್ನೈ: ಮಧುರೈ ಅಧೀನಮ್‌ ಮಠಕ್ಕೆ ಪ್ರವೇಶಿದಂತೆ ಸ್ವಾಮಿ ನಿತ್ಯಾನಂದಗೆ ಮದ್ರಾಸ್‌ ಹೈಕೋರ್ಟ್‌ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಮಠಕ್ಕೆ ಪ್ರವೇಶಿಸಲು ಪೊಲೀಸ್‌ ಭದ್ರತೆಯನ್ನು ಒದಗಿಸಬೇಕು ಎಂದು ನಿತ್ಯಾನಂದ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆರ್‌. ಮಹದೇವನ್‌ ಈ ಆದೇಶ ಹೊರಡಿಸಿದ್ದು, ನಿತ್ಯಾನಂದ ಹಾಗೂ ಅವರ ಭಕ್ತರು ಮಧುರೈ ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಅಲ್ಲದೆ ಈ ಸಂಬಂಧ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ, ಹಿಂದು ಧಾರ್ಮಿಕ ಮತ್ತು ದತ್ತಿ ಕಮಿಷನರ್‌ ಹಾಗೂ ಮಧುರೈ ಜಿಲ್ಲಾಧಿಕಾರಿಗೆ ನೋಟಿಸ್‌ ನೀಡಿ, ವಿಚಾರಣೆಯನ್ನು ಮುಂದೂಡಿದೆ.

Advertisement

ಮಧುರೈ ಮಠಕ್ಕೆ ನೇಮಕಗೊಂಡಿದ್ದ ನಿತ್ಯಾನಂದ: 2012ರಲ್ಲಿ ಮಧುರೈ ಅಧೀನಮ್‌ ಪೀಠದ 293ನೇ ಸ್ವಾಮೀಜಿ
ಯನ್ನಾಗಿ ನಿತ್ಯಾನಂದರನ್ನು ಘೋಷಸಲಾಗಿತ್ತು. ಆದರೆ ಇದಕ್ಕೆ ಹಿರಿಯ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಈ ನೇಮಕ ವನ್ನು ರದ್ದುಗೊಳಿಸಿದ್ದರು. ಈ ಹಿನ್ನೆಲೆ ಯಲ್ಲಿ ನಿತ್ಯಾನಂದ ಹೈಕೋರ್ಟ್‌ ಮೊರೆ ಹೋಗಿದ್ದು, ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೆ ಮಠಕ್ಕೆ ನೇಮಕಗೊಂಡ ನಂತರ ರದ್ದುಗೊಳಿಸಲಾಗದು ಎಂದು ನಿತ್ಯಾನಂದ ವಾದಿಸಿದ್ದರು.

ಆಸ್ತಿ ಕಬಳಿಸುವ ಹುನ್ನಾರ: ಈ ಮಧ್ಯೆ ಮಠಕ್ಕೆ ಹಿಂದಿನ ಬಾಗಿಲಿನಿಂದ ಪ್ರವೇಶಿಸಲು ನಿತ್ಯಾನಂದ ಪ್ರಯತ್ನಿಸಿದ್ದರು
ಎಂದು ಆರೋಪಿಸಲಾಗಿದೆ. ಮಠದ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಧುರೈ ಮಠದ ಆಡಳಿತ
ಮಂಡಳಿ ಪ್ರತ್ಯೇಕ ದೂರು ಸಲ್ಲಿಸಿ.

Advertisement

Udayavani is now on Telegram. Click here to join our channel and stay updated with the latest news.

Next