Advertisement

Bawaal: “ಬವಾಲ್‌”ನಲ್ಲಿ 2ನೇ ಮಹಾಯುದ್ಧದ ಉಲ್ಲೇಖ; ಸತ್ಯವನ್ನು ರಿವೀಲ್‌ ಮಾಡಿದ ನಿರ್ದೇಶಕ

05:56 PM Jul 13, 2023 | Team Udayavani |

ಮುಂಬಯಿ: ʼದಂಗಲ್‌ʼ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂಬರುವ ‘ಬವಾಲ್’ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಟ್ರೇಲರ್‌ ರಿಲೀಸ್‌ ಆದ ದಿನದಿಂದ ಕೆಲವೊಂದು ವಿಚಾರಗಳು ನೆಟ್ಟಿಗರನ್ನು ಕಾಡಿದೆ.

Advertisement

ವರುಣ್‌ ಧವನ್‌ – ಜಾಹ್ನವಿ ಕಪೂರ್‌ ಮೊದಲ ಬಾರಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ʼಬವಾಲ್‌ʼ ಈಗಾಗಲೇ ಟ್ರೇಲರ್‌ ಹಾಗೂ ಹಾಡುಗಳಿಂದ ಗಮನ ಸೆಳೆದಿದೆ.

ಸಿನಿಮಾದಲ್ಲಿ ವರುಣ್ ಧವನ್ ಹಿಸ್ಟರಿ ಟೀಚರ್‌ ಆಗಿದ್ದಾರೆ.  ಜಾಹ್ನವಿ ಕಪೂರ್‌ ಹಾಗೂ ನಾಯಕ ನಟ ವರುಣ್‌ ಧವನ್‌ ಇಟಲಿಗೆ ಶಿಫ್ಟ್‌ ಆಗುವ ಬಗ್ಗೆ ಟ್ರೇಲರ್‌ ನಲ್ಲಿ ತೋರಿಸಲಾಗಿದೆ. ಇದಲ್ಲದೇ ಗ್ಯಾಸ್‌ ಚೇಂಬರ್‌ ನಲ್ಲಿ ನಾಯಕಿ ಸಿಲುಕುವ ದೃಶ್ಯವೊಂದನ್ನು ತೋರಿಸಲಾಗಿದೆ. ಈ ದೃಶ್ಯ ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಇದು ಇಟಲಿಯಲ್ಲಿ ಎರಡನೇ ಮಹಾಯುದ್ಧದ ವೇಳೆ ನಡೆದ ಗ್ಯಾಸ್‌ ಚೇಂಬರ್‌ ನರಮೇಧದ ಸುತ್ತ ಸಾಗುವ ಕಥೆಯೆಂದು ಅನೇಕರು ಹೇಳಿದ್ದಾರೆ

ಇದೀಗ ಸ್ವತಃ ನಿರ್ದೇಶಕರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಗಲಾಟಾ ಪ್ಲಸ್” ನಲ್ಲಿನ ಸಂದರ್ಶನದಲ್ಲಿ ಯಾಕೆ ಎರಡನೇ ವಿಶ್ವ ಯುದ್ಧದ ಬಗ್ಗೆ ಸಿನಿಮಾದಲ್ಲಿ ಸೇರಿಸಲಾಗಿದೆ ಎನ್ನುವುದರ ಬಗ್ಗೆ ಹೇಳಿದ್ದಾರೆ.

“ನಾನು ಯಾವಾಗಲೂ ಪ್ರೇಕ್ಷಕರಿಗೆ ಹೊಸತು ಹಾಗೂ ವಿಭಿನ್ನವಾದದ್ದನ್ನು ನೀಡಲು ಬಯಸುತ್ತೇನೆ” ಎಂದಿದ್ದಾರೆ.

Advertisement

ಭಾರತ ಭಾಗವಹಿಸಿರುವ ಯುದ್ದವನ್ನು ಯಾಕೆ ಆಯ್ದುಕೊಂಡಿಲ್ಲ ಎಂದು ನಿರ್ದೇಶಕರ ಬಳಿ ಕೇಳಿದಾಗ “ಭಾರತೀಯ ಐತಿಹಾಸಿಕ ಉಲ್ಲೇಖವನ್ನು ಸೇರಿಸಿದರೆ ಅದನ್ನು ಮಾಡುವುದು ತುಂಬಾ ಸುಲಭವಾಗುತ್ತದೆ. ಬದಲಾಗಿ ನಾನು ವಿಭಿನ್ನವಾದ ಮಾರ್ಗವನ್ನು ಅನುಸರಿಸಿಕೊಂಡೆ. ಎರಡನೇ ಮಹಾಯುದ್ಧವನ್ನು ಶಾಲೆಯಲ್ಲಿ ಕಲಿಸುವುದಕ್ಕಿಂತ ಹೆಚ್ಚಾಗಿ, ನಮ್ಮ ಯಾವುದೇ ಐತಿಹಾಸಿಕ ವಿಷಯವನ್ನು ಕಲಿಸಬಹುದಿತ್ತು. ನಾನು ಯಾವಾಗಲೂ ಪ್ರೇಕ್ಷಕರಿಗೆ ಕಥೆ ಹಾಗೂ ದೃಶ್ಯದ ವಿಚಾರದಲ್ಲಿ ಹೊಸತನ್ನು ನೀಡಲು ಹಂಬಲಿಸುವವನು” ಎಂದು ಹೇಳಿದರು.

ಇದನ್ನೂ ಓದಿ: Masala dosa: ಮಸಾಲೆ ದೋಸೆಯೊಂದಿಗೆ ಸಾಂಬಾರ್‌ ನೀಡದ್ದಕ್ಕೆ ರೆಸ್ಟೋರೆಂಟ್‌ ಗೆ 3,500 ರೂ ದಂಡ

“ಭಾರತ ಭಾಗವಾಗಿರುವ ಯುದ್ಧಗಳ ಬಗ್ಗೆ ಸಿನಿಮಾ ಮಾಡಲು ಅನೇಕ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ವಿಚಾರವನ್ನು ಮತ್ತೆ ತೆರೆಯ ಮೇಲೆ ಹೊಸದಾಗಿ ತರಲು ಸಾಧ್ಯವಿಲ್ಲ. ಟ್ರೇಲರ್‌ ಹತ್ಯಾಕಾಂಡದ ಎರಡು ಶಾಟ್‌ಗಳನ್ನು ಮಾತ್ರ ತೋರಿಸಿದ್ದೇವೆ” ಎಂದರು.

“ಭಾರತದ ಭಾಗವಾಗಿರುವ ಯುದ್ಧಗಳ ಬಗ್ಗೆ ಅನೇಕ ಭಾರತೀಯ ನಿರ್ದೇಶಕರು ಸಿನಿಮಾ ಮಾಡಲು ಪ್ರಯತ್ನಿಸಿದ್ದಾರೆ. ಈ ವಿಷಯದಲ್ಲಿ ಮತ್ತೆ ತೆರೆಯ ಮೇಲೆ ಹೊಸದನ್ನು ತರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

“ಈ ಹಿಂದಿನ ಸ್ಕ್ರಿಪ್ಟ್‌  ಜಲಿಯನ್ ವಾಲಾಬಾಗ್ ದುರಂತದ ಬಗ್ಗೆ ಉಲ್ಲೇಖಿಸುವ ಕುರಿತು ಇತ್ತು.ಆದರೆ ವಿಕ್ಕಿ ಕೌಶಲ್ ಅವರ ʼಸರ್ದಾರ್ ಉದಾಮ್ʼ ಬಿಡುಗಡೆಯಾದ ನಂತರ ಅದನ್ನು ತೆಗೆದು ಹಾಕುವ ನಿರ್ಧಾರಕ್ಕೆ ಬರಲಾಯಿತು. ಯಾಕೆಂದರೆ ಅದು ಮುಂದೆ ಮತ್ತೆ ಬಂದರೆ ಹೊಸ ಕಂಟೆಂಟ್ ಅಲ್ಲ”‌ ಎಂದರು.

ವರುಣ್ ಮತ್ತು ಜಾನ್ವಿ ನಟಿಸಿರುವ “ಬವಾಲ್” ಸಿನಿಮಾವನ್ನು ಸಾಜಿದ್ ನಾಡಿಯಾಡ್ವಾಲಾ ಮತ್ತು ಅಶ್ವಿನಿ ಅಯ್ಯರ್ ತಿವಾರಿ ನಿರ್ಮಿಸಿದ್ದಾರೆ. ಈ ಸಿನಿಮಾ ಜು.21 ರಂದು ಅಮೇಜಾನ್‌ ಪ್ರೈಮ್‌ ನಲ್ಲಿ ಪ್ರಿಮಿಯರ್ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next