Advertisement

ದಿ ಮೆಟ್‌ ಮಂಡಳಿಗೆ ನೀತಾ ಅಂಬಾನಿ ಆಯ್ಕೆ

10:02 AM Nov 18, 2019 | Team Udayavani |

ನ್ಯೂಯಾರ್ಕ್‌: ಉದ್ಯಮಿ ನೀತಾ ಅಂಬಾನಿ ಅವರನ್ನು ದಿ ಮೆಟ್ರೋಪಾಲಿ  ಟನ್‌ ಮ್ಯೂಸಿಯಂ ಆಫ್ ಆರ್ಟ್‌ನ ಗೌರವ ಟ್ರಸ್ಟಿಯಾಗಿ ಆಯ್ಕೆ ಮಾಡಲಾಗಿದ್ದು, ಈ ಗೌರವ ಪಡೆದ ಮೊದಲ ಭಾರತೀಯಳೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Advertisement

ಮ್ಯೂಸಿಯಂ (ದಿ ಮೆಟ…) ಅಧ್ಯಕ್ಷ ಡೇನಿಯಲ್‌ ಬ್ರಾಡಿÕ$R ಈ ಮಾಹಿತಿ ನೀಡಿದ್ದು, ನೀತಾ ಅವರ ಬದ್ಧತೆ, ಭಾರತ ದಲ್ಲಿ ಕಲೆ ಮತ್ತು ಸಂಸ್ಕೃತಿಯ ಉಳಿವಿಗೆ ಅವರು ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದಿದ್ದಾರೆ.

ನೀತಾ ಅಂಬಾನಿ ಅವರು ಪ್ರತಿಕ್ರಿಯಿಸಿ, ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಲೆ, ಸಂಸ್ಕೃತಿಯನ್ನು ಪ್ರತಿನಿಧಿಸುವ ನಮ್ಮ ಬದ್ಧತೆಗೆ ಬಲ ನೀಡುವಂಥ ದಿ ಮೆಟ್‌ನ ಕಾರ್ಯದಿಂದ ನಾನು ಪ್ರಭಾವಿತಳಾಗಿ ದ್ದೇನೆ. ಭಾರತದ ಪರಂಪರೆಯನ್ನು ಪ್ರಪಂಚಕ್ಕೆ ತೋರಿಸುವ ಪ್ರಯತ್ನವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next