ಮುಂಬೈ: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ(IOC) ಥಾಮಸ್ ಬಾಚ್ ಅವರನ್ನು ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಬುಧವಾರ ತಮ್ಮ ನಿವಾಸ ಆಂಟಿಲಿಯಾಕ್ಕೆ ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ನೀಡಿದರು.
141 ನೇ ಐಒಸಿ ಅಧಿವೇಶನಕ್ಕೆ ಕೆಲವೇ ದಿನಗಳ ಮೊದಲು, ಅಂಬಾನಿ ದಂಪತಿ ಥಾಮಸ್ ಬಾಚ್ ಅವರಿಗೆ ಆದರಾತಿಥ್ಯ ನೀಡಿದರು. ನೀತಾ ಅಂಬಾನಿಯವರು ಬಾಚ್ ಅವರನ್ನು ಮನೆಗೆ ಆರತಿ ಬೆಳಗಿ, ಹಣೆಯ ಕುಂಕುಮದ ತಿಲಕವಿಟ್ಟು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಮುಖೇಶ್ ಅಂಬಾನಿ- ನೀತಾ ಅಂಬಾನಿ ಮತ್ತು ಥಾಮಸ್ ಬಾಚ್ ಅವರ ಫೋಟೋ ವೈರಲ್ ಆಗಿದೆ. 141 ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನವು ಅಕ್ಟೋಬರ್ 15 ರಿಂದ 17ರ ವರೆಗೆ ಮುಂಬೈನಲ್ಲಿ ನಡೆಯಲಿದೆ.