Advertisement

ಐಪಿಎಲ್‌ ಹರಾಜಿಗೂ ಮುನ್ನ ನಿದ್ರೆಯೇ ಮಾಡಿಲ್ಲ ನೀತಾ ಅಂಬಾನಿ!

06:40 AM Feb 01, 2018 | |

ಮುಂಬೈ: ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಹರಾಜಿಗೂ ಮುನ್ನ ದಿನ ರಾತ್ರಿಯಿಡೀ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ನೀತಾ ಅಂಬಾನಿ ಹಾಗೂ ಅವರ ಪುತ್ರ ಆಕಾಶ್‌ ನಿದ್ರೆಯೇ ಮಾಡಿಲ್ಲವಂತೆ.

Advertisement

ಇದನ್ನು ಸ್ವತಃ ಟೀವಿ ಸಂದರ್ಶನವೊಂದರಲ್ಲಿ ಆಕಾಶ್‌ ತಿಳಿಸಿದ್ದಾರೆ. ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸಿ ಕೈರನ್‌ ಪೊಲಾರ್ಡ್‌ ಹಾಗೂ ಕೃಣಾಲ್‌ ಪಾಂಡ್ಯರನ್ನು ಪಡೆಯುವ ಗುರಿ ಹೊಂದಿದ್ದೆವು. ಎಲ್ಲಿ ನಮ್ಮ ಯೋಜನೆ ಕೈಕೊಡುತ್ತದೋ ಎಂದು ತುಂಬಾನೆ ಹೆದರಿಕೊಂಡಿದ್ದೆವು. ಒತ್ತಡಕ್ಕೆ ಒಳಗಾಗಿದ್ದೆವು. 

ರಾತ್ರಿಯಿಡೀ ಚಿಂತೆಯಲ್ಲಿಯೇ ಕಳೆದೆವು ಎಂದು ಅವರು ತಿಳಿಸಿದರು. ಮರುದಿನ ಹರಾಜಿನಲ್ಲಿ ಆರ್‌ಟಿಎಂ ಬಳಸಿ ಮುಂಬೈ ಫ್ರಾಂಚೈಸಿ ತಾನು ಅಂದುಕೊಂಡಿದ್ದ ಆಟಗಾರರನ್ನು ಖರೀದಿಸಿತ್ತು. ಒಟ್ಟಾರೆ 46.35 ಕೋಟಿ ಹಣ ಖರ್ಚು ಮಾಡಿ 25 ಆಟಗಾರರನ್ನು ಖರೀದಿಸಿತ್ತು. ರೋಹಿತ್‌ ಸೇರಿದಂತೆ ಮೂವರು ಆಟಗಾರರನ್ನು ಮೊದಲೇ ಉಳಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next