ನವದೆಹಲಿ: ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾ ಸೇರಿದಂತೆ ಮೂರು ದೇಶದ ಮಾರುಕಟ್ಟೆಗಳಿಗೆ ಮ್ಯಾಗ್ನೈಟ್ ಸಬ್ ಕಾಂಪ್ಯಾಕ್ಟ್ ಎಸ್ ಯುವಿ ರಫ್ತು ಪ್ರಾರಂಭಿಸಿರುವುದಾಗಿ ನಿಸ್ಸಾನ್ ಇಂಡಿಯಾ ಕಂಪನಿ ಮಂಗಳವಾರ(ಜೂನ್ 22) ಘೋಷಿಸಿದೆ.
ಇದನ್ನೂ ಓದಿ:ಕೋವಿಡ್ ಪ್ಯಾಕೇಜ್: 20,713 ಕಲಾವಿದರಿಗೆ ತಲಾ ಮೂರು ಸಾವಿರ ರೂ. ನೆರವು ನೀಡಿಕೆ
ಜಗತ್ತಿನ ವಿವಿಧೆಡೆ ರಫ್ತುಗೊಳ್ಳುತ್ತಿರುವ ಎಲ್ಲಾ ನೂತನ ನಿಸ್ಸಾನ್ ಮ್ಯಾಗ್ನೈಟ್ ಸಂಪೂರ್ಣವಾಗಿ ಭಾರತದಲ್ಲಿಯೇ(ಮೇಡ್ ಇನ್ ಇಂಡಿಯಾ) ತಯಾರಿಸಲ್ಪಟ್ಟಿದೆ. 2020ರ ಡಿಸೆಂಬರ್ ನಲ್ಲಿ ನಿಸ್ಸಾನ್ ಮಾರಾಟದ ಬಗ್ಗೆ ಆಫರ್ ನೀಡಿತ್ತು. ಬಳಿಕ 2021ರ ಮೇ ಅಂತ್ಯದವರೆಗೆ ತಮಿಳುನಾಡಿನ ಒರಗಡಮ್ ಘಟಕದಲ್ಲಿ ಬರೋಬ್ಬರಿ 15,010 ಯೂನಿಟ್ ಮ್ಯಾಗ್ನೈಟ್ ಎಸ್ ಯುವಿಯನ್ನು ಉತ್ಪಾದಿಸಿರುವುದಾಗಿ ವಿವರಿಸಿದೆ.
ಇದರಲ್ಲಿ 13,790 ಯೂನಿಟ್ಸ್ ಭಾರತದಲ್ಲಿ ಮಾರಾಟವಾಗಿದ್ದು, ಉಳಿದ 1220 ಯೂನಿಟ್ಸ್ ದೇಶದಿಂದ ರಫ್ತು ಮಾಡಲಾಗಿದೆ ಎಂದು ಅಂಕಿಅಂಶ ತಿಳಿಸಿದೆ. ಈ ವರ್ಷದ ಏಪ್ರಿಲ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಸ್ ಯುವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದೆ.
ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ 50,000 ಸಾವಿರಕ್ಕಿಂತಲೂ ಅಧಿಕ ಮ್ಯಾಗ್ನೈಟ್ ಬುಕ್ಕಿಂಗ್ ಆಗಿತ್ತು. ಅಲ್ಲದೇ ಈ ಮಾದರಿಯ ಎಸ್ ಯುವಿಗೆ ಹೆಚ್ಚಿನ ಬೇಡಿಕೆ ಬಂದಿರುವುದಾಗಿ ಪ್ರಕಟಣೆಯಲ್ಲಿ ವಿವರಿಸಿದೆ.