Advertisement

ಪಡಿತರ ಕೇಂದ್ರದಲ್ಲಿ ಮೋದಿ ಚಿತ್ರ ಯಾಕಿಲ್ಲ? ಜಿಲ್ಲಾಧಿಕಾರಿಗೆ ಸಚಿವೆ ನಿರ್ಮಲಾ ತರಾಟೆ

07:35 PM Sep 03, 2022 | Team Udayavani |

ಕಮರೆಡ್ಡಿ (ತೆಲಂಗಾಣ): ತೆಲಂಗಾಣದ ಕಮರೆಡ್ಡಿ ಜಿಲ್ಲೆಯಲ್ಲಿ ಶುಕ್ರವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಜಿಲ್ಲಾಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿದೆ.

Advertisement

ಬಿಜೆಪಿ ಲೋಕಸಭಾ ಪ್ರವಾಸ ಯೋಜನೆ ಅಂಗವಾಗಿ ನಿರ್ಮಲಾ ಅವರು ಝಹೀರಾಬಾದ್‌ ಕ್ಷೇತ್ರಕ್ಕೆ ತೆರಳಿದ್ದರು. ಈ ವೇಳೆ ಬಿಕೂìರ್‌ ಎಂಬ ಮಂಡಲ ಕೇಂದ್ರದ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕಮರೆಡ್ಡಿ ಜಿಲ್ಲಾಧಿಕಾರಿ ಜಿತೇಶ್‌ ಪಾಟೀಲ್‌ ಕೂಡ ಇದ್ದರು. ಈ ವೇಳೆ ಜನರಿಗೆ 1 ರೂ.ನಲ್ಲಿ ನೀಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲೆಷ್ಟು ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಲು ಪಾಟೀಲ್‌ ತಡವರಿಸಿದಾಗ, ಇನ್ನರ್ಧ ಗಂಟೆಯೊಳಗೆ ಸರಿಯಾದ ಉತ್ತರ ನೀಡಬೇಕು ಎಂದು ತಾಕೀತು ಮಾಡಿದರು.

ಕೂಡಲೇ ಅವರ ಗಮನಕ್ಕೆ ಪಡಿತರ ಅಂಗಡಿಗಳಲ್ಲಿ ಮೋದಿ ಚಿತ್ರವಿಲ್ಲದಿರುವುದು ಕಂಡುಬಂತು. ಯಾಕೆ ಹೀಗೆ? ಮಾರುಕಟ್ಟೆಯಲ್ಲಿ 35 ರೂ. ಬೆಲೆಯಿರುವ 1 ಕೆಜಿ ಅಕ್ಕಿಗೆ ಕೇಂದ್ರ ತನ್ನ ಪಾಲಾಗಿ 30 ರೂ. ನೀಡುತ್ತದೆ. ಸಾಗಣೆ ಸೇರಿ ಎಲ್ಲ ವೆಚ್ಚಗಳನ್ನು ಭರಿಸುತ್ತದೆ, ರಾಜ್ಯಗಳು 4 ರೂ. ನೀಡುತ್ತವೆ. 1 ರೂ. ಅನ್ನು ಮಾತ್ರ ಜನರಿಂದ ಪಡೆದುಕೊಳ್ಳಲಾಗುತ್ತದೆ. ಇಷ್ಟಾಗಿಯೂ ಇಲ್ಲಿ ಮೋದಿ ಚಿತ್ರ ಯಾಕಿಲ್ಲ? ಎಂದು ಜಿಲ್ಲಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮುಂದಿನ ಬಾರಿ ಮತ್ತೆ ಬರುತ್ತೇನೆ. ಆಗ ಎಲ್ಲವನ್ನೂ ಸರಿಪಡಿಸಿರಬೇಕು ಎಂದು ಆದೇಶಿಸಿದರು.

ಇದಕ್ಕೆ ತಿರುಗೇಟು ನೀಡಿರುವ ಆಡಳಿತಾರೂಢ ಟಿಆರ್‌ಎಸ್‌ ಕಾರ್ಯಕರ್ತರು, ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಮೋದಿ ಫೋಟೋ ಅಂಟಿಸಿದ್ದಾರೆ. ಜತೆಗೆ, ಸಿಲಿಂಡರ್‌ನ ದರ 1,105 ರೂ. ಎಂದೂ ಬರೆದಿದ್ದಾರೆ. “2014ರಲ್ಲಿ ಮೋದಿ ಅವರು ಪ್ರಧಾನಿ ಹುದ್ದೆಗೆ ಏರುವಾಗ ಸಿಲಿಂಡರ್‌ ದರ ಕೇವಲ 410 ರೂ. ಇತ್ತು. ನಿರ್ಮಲಾ ಅವರೇ, ಮೋದಿ ಫೋಟೋ ಇಲ್ಲಿದೆ ನೋಡಿ’ ಎಂದೂ ಟಿಆರ್‌ಎಸ್‌ ನಾಯಕರು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next