Advertisement

ಭಾರತದ ಬಗ್ಗೆ ನಕಾರಾತ್ಮಕತೆ ಬೇಡ: ಪಾಶ್ಚಾತ್ಯ ರಾಷ್ಟ್ರಗಳ ವಿರುದ್ಧ Nirmala Sitharamanಕಿಡಿ

11:59 PM Apr 11, 2023 | Team Udayavani |

ವಾಷಿಂಗ್ಟನ್‌: ಭಾರತದ ಬಗ್ಗೆ ನಕಾರಾತ್ಮಕ ಧೋರಣೆ ಪ್ರದರ್ಶಿಸುವ ಪಾಶ್ಚಾತ್ಯರ ವಿರುದ್ಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಗುಡುಗಿದರು.

Advertisement

ಅಮೆರಿಕದ ಪೀಟರ್ಸನ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಟರ್‌ನ್ಯಾಶನಲ್‌ ಎಕನಾಮಿಕ್ಸ್‌ನಲ್ಲಿ ನಡೆದ ಸಂವಾದ ಹಾಗೂ ಯುಎಸ್‌ ಇಂಡಿಯಾ ಬ್ಯುಸಿನೆಸ್‌ ಕೌನ್ಸಿಲ್‌ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, “ಭಾರತದಲ್ಲಿ ಹೂಡಿಕೆ ಮಾಡುವವರು ಮೊದಲು ದೇಶಕ್ಕೆ ಬಂದು ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತೇ ಬಂಡವಾಳ ಹೂಡಿ. ಯಾರೋ ಎಲ್ಲೋ ಕುಳಿತು ಬರೆದ ವರದಿ ನಂಬಬೇಡಿ,’ ಎಂದು ಹೇಳಿದರು. ಭಾರತವು ನ್ಯಾಯಯುತ, ನಿಷ್ಪಕ್ಷ ಆರ್ಥಿ ಕತೆಯ ಅಗತ್ಯತೆಯನ್ನು ಮೈಗೂಡಿಸಿಕೊಂಡಿದ್ದು, ಯಾ ವುದೇ ಹಿಂಜರಿಕೆ ಯಿಲ್ಲದೆ ದೇಶದಲ್ಲಿ ಹೂಡಿಕೆ ಮಾಡ ಬಹುದು ಎಂದೂ ಕರೆ ನೀಡಿದರು.

ಇದೇ ವೇಳೆ ಸಚಿವರನ್ನು ಭೇಟಿಯಾದ ಅಮೆರಿಕದಲ್ಲಿನ ಸಿಕ್ಖ್ ಸಮುದಾಯದ ನಾಯಕರು, “ಸಿಕ್ಖ್ರು ರಾಷ್ಟ್ರೀಯವಾದಿಗಳು ಮತ್ತು ಅಖಂಡ ಭಾರತ ದೊಂದಿಗೆ ನಿಲ್ಲುತ್ತಾರೆ. ಭಾರತದ ಸಂವಿಧಾನದ ಅಡಿ ಯಲ್ಲಿ ಸಿಕ್ಖ್ರ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. ಸಮುದಾಯದ ಬಹು ಕಾಲದ ಬೇಡಿಕೆಗಳು, ಹಿತಾ ಸಕ್ತಿಗಾಗಿ ಪ್ರಧಾನಿ ಮೋದಿ ತೆಗೆದುಕೊಂಡ ಕ್ರಮ ಗಳು ಪ್ರತ್ಯೇಕತಾವಾದಿ ಖಲಿಸ್ಥಾನ ಚಳವಳಿಯಿಂದ ಹೊರಬರಲು ಕಾರಣ ವಾಗಿವೆ,’ ಎಂದು ಹೇಳಿದೆ.

ಮುಸ್ಲಿಮರ ಜನಸಂಖ್ಯೆ ಹೆಚ್ಚಲು ಸಾಧ್ಯವಾಗುತ್ತಿತ್ತೇ?
“ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ಥಾನದಲ್ಲಿ ವಾಸಿಸುತ್ತಿರುವ ವರಿಗಿಂತಲೂ ಉತ್ತಮ ಸ್ಥಿತಿಯಲ್ಲಿ¨ªಾರೆ. ಅತೀ ಹೆಚ್ಚು ಮುಸ್ಲಿಮರನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ ಭಾರತ,’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. “ಭಾರತದಲ್ಲಿ ನಿಜಕ್ಕೂ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ದೇಶದಲ್ಲಿ ಅವರ ಜನಸಂಖ್ಯೆ ಹೆಚ್ಚಳವಾಗಲು ಸಾಧ್ಯ ವಾಗುತ್ತಿತ್ತೇ?,’ ಎಂದು ಪ್ರಶ್ನಿ ಸಿದರು. “ಭಾರತದಲ್ಲಿ ಮುಸ್ಲಿ ಮರು ವ್ಯಾಪಾರ ಮಾಡಿ ಕೊಂ ಡಿ¨ªಾರೆ. ಅವರ ಮಕ್ಕಳು ಶಿಕ್ಷಣ ಪಡೆಯುತ್ತಿ ರುವುದನ್ನು ನೀವು ಕಾಣ ಬಹುದು. ಸರಕಾರದ ವತಿಯಿಂದ ಅವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ,’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next