Advertisement

NIRF Ranking: ದೇಶದ ಶಿಕ್ಷಣ ಸಂಸ್ಥೆಗಳ ರ್‍ಯಾಂಕಿಂಗ್‌ನಲ್ಲಿ ಕರ್ನಾಟಕದ 78ಕ್ಕೆ ಸ್ಥಾನ

12:34 AM Aug 13, 2024 | Team Udayavani |

2024ನೇ ಸಾಲಿನ ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ ಅನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸೋಮವಾರ ಬಿಡುಗಡೆಗೊಳಿಸಿದ್ದು, ಪಟ್ಟಿಯಲ್ಲಿ ದೇಶದ 2ನೇ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆ ಎಂಬ ಗರಿ ಬೆಂಗಳೂರಿನ ಐಐಎಸ್‌ಸಿಗೆ ಸಂದಿದೆ. ಒಟ್ಟು 16 ವಿಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರ್‍ಯಾಂಕಿಂಗ್‌ ಪ್ರಕಟಿಸಲಾಗಿದೆ. ಈ ಪೈಕಿ 14 ವಿಭಾಗಗಳಲ್ಲಿ ಕರ್ನಾಟಕದ 78 ಶಿಕ್ಷಣ ಸಂಸ್ಥೆಗಳು ವಿವಿಧ ರ್‍ಯಾಂಕಿಂಗ್‌ ಪಡೆದುಕೊಂಡಿವೆ. ಯಾವ ವಿಭಾಗದಲ್ಲಿ ಕರ್ನಾಟಕದ ಯಾವ ಶಿಕ್ಷಣ ಸಂಸ್ಥೆಗಳಿಗೆ ಯಾವ ಶ್ರೇಯಾಂಕ ದೊರೆತಿದೆ ಎಂಬ ವಿವರ ಹೀಗಿದೆ…

Advertisement

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು: ಐಐಎಸ್‌ಸಿ ಬೆಂಗಳೂರು (2), ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (14ನೇ ಸ್ಥಾನ) , ಜೆಎಸ್‌ಎಸ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ -ಮೈಸೂರು (36), ಎನ್‌ಐಟಿಕೆ ಸುರತ್ಕಲ್‌ (46), ಮೈಸೂರ್‌ ವಿವಿ (86), ಕ್ರೈಸ್ಟ್‌ ವಿವಿ(90).

ಉತ್ತಮ ವಿಶ್ವವಿದ್ಯಾನಿಲಯಗಳು:  ಐಐಎಸ್‌ಸಿ ಬೆಂಗಳೂರು (1) ಸತತ 9ನೇ ಬಾರಿ, ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (4), ಜೆಎಸ್‌ಎಸ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ (24), ಮೈಸೂರು ವಿವಿ (54), ಕ್ರೈಸ್ಟ್‌ ವಿವಿ (60), ಜೈನ್‌ ವಿವಿ (65), ನಿಟ್ಟೆ ಮಂಗಳೂರು (66), ವಿಶ್ವೇಶ್ವರಯ್ಯ ಟೆಕ್ನಾಲಜಿ ಬೆಳಗಾವಿ (75), ಬೆಂಗಳೂರು ವಿವಿ (81), ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್‌ ಸೈನ್ಸ್‌ ಬೆಂಗಳೂರು (90) ಯೇನಪೊಯ ವಿವಿ ಮಂಗಳೂರು (95).

ಉತ್ತಮ ಕಾಲೇಜು: ಸೈಂಟ್‌ ಜೋಸೆಫ್ ಕಾಲೇಜ್‌ ಆಫ್ ಕಾಮರ್ಸ್‌, ಬೆಂಗಳೂರು (55), ಸೈಂಟ್‌ ಅಲೋಶಿಯಸ್‌, ಮಂಗಳೂರು (58), ಕ್ರಿಸ್ತ ಜಯಂತಿ ಕಾಲೇಜು, ಬೆಂಗಳೂರು (60), ಎಂ.ಎಸ್‌.ರಾಮಯ್ಯ ಕಾಲೇಜು -ಬೆಂಗಳೂರು (87)

ಸಂಶೋಧನ ವಿಭಾಗ:
ಐಐ ಎ ಸ್‌ಸಿ ಬೆಂಗಳೂರು (1), ಜವಾಹರ್‌ ಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ರಿಚರ್ಸ್‌ (34) ಎನ್‌ಐಟಿಕೆ ಸುರತ್ಕಲ್‌ (42), ನಿಮ್ಹಾನ್ಸ್‌ (43).

Advertisement

ಎಂಜಿನಿಯರಿಂಗ್‌ ವಿಭಾಗ: ಎನ್‌ಐಟಿಕೆ ಸುರತ್ಕಲ್‌ (17), ವಿಶ್ವೇಶ್ವರಯ್ಯ ಟೆಕ್ನಾಲಜಿ -ಬೆಳಗಾವಿ (69), ಐಐಐಟಿ – ಬೆಂಗಳೂರು (74), ಎಂ.ಎಸ್‌.ರಾಮಯ್ಯ ತಂತ್ರಜ್ಞಾನ ಸಂಸ್ಥೆ (75), ಕ್ರೈಸ್ಟ್‌ ವಿವಿ (93), ಜೈನ್‌ ವಿವಿ (95), ಆರ್‌ವಿ ಕಾಲೇಜ್‌ ಆಫ್ ಎಂಜಿನಿಯರಿಂಗ್‌ (99), ಸಿದ್ಧಗಂಗಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (100).

ಮ್ಯಾನೇಜ್‌ಮೆಂಟ್‌: ಐಐಎಂ ಬೆಂಗಳೂರು (2), ಕ್ರೈಸ್ಟ್‌ ವಿವಿ (60), ಅಲಯೆನ್ಸ್‌ ವಿವಿ (71), ಜೈನ್‌ ವಿವಿ (77)
n ಫಾರ್ಮಸಿ: ಜೆಎಸ್‌ಎಸ್‌ ಕಾಲೇಜ್‌ ಆಫ್ ಫಾರ್ಮಸಿ (6), ಎನ್‌ಜಿಎಸ್‌ಎಂ ಇನ್‌ಸ್ಟಿಟ್ಯೂಟ್‌ ಆಫ್ ಫಾರ್ಮಾಸ್ಯುಟಿಕಲ್‌ ಸೈನ್ಸ್‌, ಮಂಗಳೂರು (41), ಕೆಎಲ್‌ಇ ಕಾಲೇಜ್‌ ಆಫ್ ಫಾರ್ಮಸಿ -ಬೆಳಗಾಂ (42), ಎಂಎಸ್‌ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೆ„ಡ್‌ ಸೈನ್ಸ್‌ (68), ಶ್ರೀ ಆದಿಚುಂಚನಗಿರಿ ಕಾಲೇಜು (83), ಆಚಾರ್ಯ ಆ್ಯಂಡ್‌ ಬಿಎಂ ರೆಡ್ಡಿ ಕಾಲೇಜ್‌ ಆಫ್ ಫಾರ್ಮಸಿ (86), ಕೃಪಾನಿಧಿ ಕಾಲೇಜ್‌ ಆಫ್ ಫಾರ್ಮಸಿ -ಬೆಂಗಳೂರು (98)

ವೈದ್ಯಕೀಯ: ನಿಮ್ಹಾನ್ಸ್‌ (4), ಸೈಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು (28), ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜು, (39), ಎಂ.ಎಸ್‌. ರಾಮಯ್ಯ ಮೆಡಿಕಲ್‌ ಕಾಲೇಜು, (46)

ದಂತ ವೈದ್ಯಕೀಯ: ಎ.ಬಿ.ಶೆಟ್ಟಿ ಮೆಮೋರಿಯಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡೆಂಟಲ್‌ ಸೈನ್ಸ್‌ – ಮಂಗಳೂರು (6), ಜೆಎಸ್‌ಎಸ್‌ ಡೆಂಟಲ್‌ ಕಾಲೇಜು ಮತ್ತು ಆಸ್ಪತ್ರೆ -ಮೈಸೂರು (12), ಎಂಎಸ್‌ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೆ„ಡ್‌ ಸೈನ್ಸ್‌(16), ಸರಕಾರಿ ಡೆಂಟಲ್‌ ಕಾಲೇಜು ಬೆಂಗಳೂರು (19), ಯೇನಪೊಯ ಡೆಂಟಲ್‌ ಕಾಲೇಜು, ಮಂಗಳೂರು (26) ಕೆಎಲ್‌ಇ ಡೆಂಟಲ್‌ ಸೈನ್ಸ್‌ (29), ಎಸ್‌ಡಿಎಂ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ ಆ್ಯಂಡ್‌ ಹಾಸ್ಪಿಟಲ್‌ (31), ಬಾಪೂಜಿ ಡೆಂಟಲ್‌ ಕಾಲೇಜ್‌ ಆ್ಯಂಡ್‌ ಹಾಸ್ಪಿಟಲ್‌- ದಾವಣಗೆರೆ ( 37)

ಕಾನೂನು ಶಿಕ್ಷಣ: ನ್ಯಾಶನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ವಿವಿ -ಬೆಂಗಳೂರು(1), ಕ್ರೈಸ್ಟ್‌ ವಿವಿ -ಬೆಂಗಳೂರು (15), ಅಲಯನ್ಸ್‌ ವಿವಿ (18)

ವಾಸ್ತುಶಿಲ್ಪ ಮತ್ತು ಯೋಜನೆ: ಎಂ.ಎಸ್‌ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ -ಬೆಂಗಳೂರು (21), ಬಿಎಂಎಸ್‌ ಕಾಲೇಜ್‌ ಆಫ್ ಆರ್ಕಿಟೆಕ್ಚರ್‌ -ಬೆಂಗಳೂರು (23), ಬಿಎಂಎಸ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ ಯಲಹಂಕ -ಬೆಂಗಳೂರು (38)

ಕೃಷಿ ಮತ್ತು ಸಂಬಂಧಿತ ಕ್ಷೇತ್ರ: ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್‌ ಸೈನ್ಸ್‌ -ಬೆಂಗಳೂರು (11), ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್‌ ಸೈನ್ಸ್‌ – ಧಾರವಾಡ (24)

ನಾವೀನ್ಯತೆ ವಿಭಾಗ: ಐಐಎಸ್‌ಸಿ -ಬೆಂಗಳೂರು (4),
ರಾಜ್ಯ ಸರಕಾರ‌ದ ಅಧೀನದ ಅತ್ಯುತ್ತಮ ವಿವಿಗಳು: ಮೈಸೂರು ವಿಶ್ವ ವಿದ್ಯಾನಿಲಯ (19), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ-ಬೆಳಗಾವಿ (22), ಬೆಂಗಳೂರು ವಿಶ್ವವಿದ್ಯಾನಿಲಯ (24), ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್‌ ಸೈನ್ಸಸ್‌- ಧಾರವಾಡ (44).

ಮಣಿಪಾಲ ಸಮೂಹದ 11 ಶಿಕ್ಷಣ ಸಂಸ್ಥೆಗಳಿಗೂ ಹಿರಿಮೆ
ಮಣಿಪಾಲ ಸಮೂಹದ 11 ಶಿಕ್ಷಣ ಸಂಸ್ಥೆಗಳಿಗೆ 9 ವಿಭಾಗದಲ್ಲಿ ವಿವಿಧ ರ್‍ಯಾಂಕಿಂಗ್‌ ದೊರೆತಿದೆ. ಈ ಪೈಕಿ 4 ಸಂಸ್ಥೆಗಳು ಅಗ್ರ 10 ರಲ್ಲಿ ಸ್ಥಾನ ಪಡೆದಿವೆ. ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌(ಮಾಹೆ) 14ನೇ ಸ್ಥಾನ ಪಡೆದಿದ್ದರೆ, ಉತ್ತಮ ವಿವಿಗಳ ಪೈಕಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ 4ನೇ ಸ್ಥಾನ ಪಡೆದಿದೆ. ಸಂಶೋಧನ ವಿಭಾಗ- ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (23), ಎಂಜಿನಿಯರಿಂಗ್‌ ವಿಭಾಗ- ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ – ಮಣಿಪಾಲ್‌ (56), ಮ್ಯಾನೇಜ್‌ಮೆಂಟ್‌- ಟಿ. ಎ. ಪೈ ಮ್ಯಾನೇಜ್‌ಮೆಂಟ್‌

ಇನ್‌ಸ್ಟಿಟ್ಯೂಟ್‌ ಮಣಿಪಾಲ್‌ (58), ಫಾರ್ಮಸಿ: ಮಣಿಪಾಲ್‌ ಕಾಲೇಜ್‌ ಆಫ್ ಫಾರ್ಮಾಸ್ಯುಟಿಕಲ್‌ ಸೈನ್ಸ್‌ -ಉಡುಪಿ ( 8), ವೈದ್ಯಕೀಯ- ಕಸ್ತೂರ್ಬಾ ಮೆಡಿಕಲ್‌ ಕಾಲೇಜು -ಮಣಿಪಾಲ (9), ಕಸ್ತೂರ್ಬಾ ಮೆಡಿಕಲ್‌ ಕಾಲೇಜು -ಮಂಗಳೂರು (33), ದಂತ ವೈದ್ಯಕೀಯ – ಮಣಿಪಾಲ್‌ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ -ಮಣಿಪಾಲ (2), ಮಣಿಪಾಲ್‌ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ -ಮಂಗಳೂರು (11), ವಾಸ್ತುಶಿಲ್ಪ ಮತ್ತು ಯೋಜನೆ :- ಮಣಿಪಾಲ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ ಆ್ಯಂಡ್‌ ಪ್ಲಾನಿಂಗ್‌ ಮಾಹೆ -ಉಡುಪಿ 28ನೇ ಶ್ರೇಯಾಂಕ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next