Advertisement

ನೀರವ್‌ ಮೋದಿ ನೀಡಿದ್ದ ನಕಲಿ ಉಂಗುರ ತಂದಿಟ್ಟ ಅವಾಂತರ

08:10 AM Oct 09, 2018 | Karthik A |

ಹೊಸದಿಲ್ಲಿ: ಪಿಎನ್‌ಬಿ ಹಗರಣದ ಆರೋಪಿ, ವಜ್ರದ ವ್ಯಾಪಾರಿ ನೀರವ್‌ ಮೋದಿಯಿಂದಾಗಿ ನಿಶ್ಚಿತಾರ್ಥ ಮುರಿದುಬಿದ್ದಿದೆ! ಕೆನಡಾದ ಆರ್ಥಿಕ ವ್ಯವಹಾರಗಳ ಕಂಪೆನಿಯೊಂದರ ಮುಖ್ಯಸ್ಥರಾದ ಆಲ್ಫೋನ್ಸೊ ಎಂಬುವರಿಗೆ ನೀರವ್‌ ಮೋದಿ ನಕಲಿ ವಜ್ರದ ಉಂಗುರಗಳನ್ನು ನೀಡಿ 1.50 ಕೋಟಿ ರೂ.ಗಳಷ್ಟು ಟೋಪಿ ಹಾಕಿದ್ದಾರೆ. ನಿಶ್ಚಿತಾರ್ಥದ ವೇಳೆ ಅಲ್ಫೋನ್ಸೋ ತಮ್ಮ ಭಾವೀ ಪತ್ನಿಗೆ ನೀಡಿದ್ದ ಈ ವಜ್ರದ ಉಂಗುರ ನಕಲಿ ಎಂದು ಗೊತ್ತಾದ ಮರುಕ್ಷಣವೇ ಸಂಬಂಧ ಮುರಿದುಬಿದ್ದಿದೆ. ಈಗ ಅಲ್ಫೋನ್ಸೋಗೆ ಅತ್ತ ಹುಡುಗಿಯೂ ಇಲ್ಲ, ಇತ್ತ ಹಣವೂ ಇಲ್ಲ ಎಂಬಂತಾಗಿದೆ.

Advertisement

ಹೇಗಾಯ್ತು ಮೋಸ?: 2012ರಲ್ಲಿ ನೀರವ್‌ ಮೋದಿ ಹಾಗೂ ಆಲ್ಫೋನ್ಸೊಗೂ ಪರಿಚಯವಾಗಿ, ಕ್ರಮೇಣ ಆತ್ಮೀಯತೆ ಬೆಳೆದಿತ್ತು. ಏಪ್ರಿಲ್‌ ತಿಂಗಳ‌ಲ್ಲಿ, ತಮ್ಮ ಪ್ರೇಯಸಿಗಾಗಿ ಎಂಗೇಜ್‌ಮೆಂಟ್‌ ಉಂಗುರಗಳನ್ನು ಕೊಳ್ಳಲು ಮುಂದಾಗಿದ್ದ ಆಲ್ಫೋನ್ಸೊಗೆ ನೀರವ್‌ ನೆನಪಾಗಿದ್ದಾರೆ. ತತ್‌ಕ್ಷಣ ನೀರವ್‌ಗೆ ಇ-ಮೇಲ್‌ ಕಳುಹಿಸಿದ್ದಾರೆ. ಆಗ, ಸರ್ವೋಚ್ಛ ಉಂಗುರಗಳೆಂದು ಹೇಳಿ 3.2 ಕ್ಯಾರಟ್‌ನ  ಬ್ರಿಲಿಯಂಟ್‌ ಡೈಮಂಡ್‌ ಕಟ್‌ ಉಳ್ಳ, 2 ಉಂಗುರಗಳನ್ನು ಕಳಿಸಿದ ನೀರವ್‌, ಒಂದೂವರೆ ಕೋಟಿ ರೂ.ಗಳನ್ನು ಆನ್‌ಲೈನ್‌ ಮೂಲಕ ಪಡೆದಿದ್ದಾನೆ. ಆದರೆ, ಗುಣಮಟ್ಟದ ಸರ್ಟಿಫಿಕೇಟ್‌ಗಳನ್ನು ತಿಂಗಳುಗಳಾದರೂ ಕಳಿಸಿರಲಿಲ್ಲ. ಅನುಮಾನಗೊಂಡ ಆಲ್ಫೋನ್ಸೊ ಪ್ರೇಯಸಿ ಉಂಗುರಗಳನ್ನು ಪರೀಕ್ಷಿಸಿದಾಗ ಅವು ನಕಲಿಯೆಂದು ಗೊತ್ತಾಗಿದೆ. ಅಲ್ಫೋನ್ಸೋ ಮೇಲೆ ಕೋಪಗೊಂಡ ಆಕೆ ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next