ಲಂಡನ್: ಬ್ರಿಟನ್ ಸುಪ್ರೀಂ ಕೋರ್ಟ್ ತಮ್ಮ ವಿರುದ್ಧ ನೀಡಿರುವ ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅನುಮತಿ ಕೋರಿ ಲಂಡನ್ ಹೈಕೋರ್ಟ್‌ಗೆ ಭಾರತದಿಂದ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿ ಅರ್ಜಿ ಸಲ್ಲಿಸಿದ್ದಾರೆ.
ಮಾನಸಿಕ ಆರೋಗ್ಯ ಸ್ಥಿತಿ ಆಧಾರದಲ್ಲಿ ನೀರವ್ ಮೋದಿ(51) ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಲಂಡನ್ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಈ ತಿಂಗಳ ಆರಂಭದಲ್ಲಿ ತಿರಸ್ಕರಿಸಿತ್ತು. “ಮಾನಸಿಕ ಆರೋಗ್ಯ ಸ್ಥಿತಿ ಕಳವಳ ಪಡುವ ಸ್ಥಿತಿಯಲ್ಲಿ ಇಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ಗೆ 16 ಸಾವಿರ ಕೋಟಿ ರೂ. ವಂಚನೆ ಆರೋಪದ ವಿಚಾರಣೆ ಎದುರಿಸಲು ಗಡಿಪಾರು ಜಾರಿಗೊಳಿಸಬಹುದು,’ ಎಂದು ನ್ಯಾಯಪೀಠ ಹೇಳಿತ್ತು.
ನೀರವ್ ಮೇಲ್ಮನವಿ ಸಲ್ಲಿಸಲು ಎರಡು ವಾರ ಸಮಯ ಹೊಂದಿದ್ದಾರೆ. ಕಾನೂನು ಹೋರಾಟದ ಆಯ್ಕೆ ಮುಕ್ತವಾಗಿದೆ ಎಂದು ಯುಕೆ ಗೃಹ ಕಚೇರಿ ಮೂಲಗಳು ತಿಳಿಸಿವೆ.