Advertisement

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

08:53 PM Oct 19, 2021 | Team Udayavani |

ವಾಷಿಂಗ್ಟನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ, ವಜ್ರೋದ್ಯಮಿ ನೀರವ್‌ ಮೋದಿಗೆ ಅಮೆರಿಕದಲ್ಲಿ ಮತ್ತೆ ನಿರಾಶೆ ಎದುರಾಗಿದೆ. ಹಿಂದೆ ತಾವೇ ಮಾಲಿಕರಾಗಿದ್ದ ಮೂರು ಕಂಪನಿಗಳ ನಿಯೋಜಿತ ಟ್ರಸ್ಟಿಯೊಬ್ಬರು, ತಮ್ಮ ಮೇಲೆಯೇ ಮಾಡಿರುವ ಆರೋಪಗಳನ್ನು ರದ್ದು ಮಾಡಬೇಕೆಂದು ನೀರವ್‌ ಮೋದಿ ನ್ಯೂಯಾರ್ಕ್‌ನ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ತಿರಸ್ಕರಿಸಿದೆ.

Advertisement

ನ್ಯಾಯಾಲಯವೇ ಫೈರ್‌ಸ್ಟಾರ್‌ ಡೈಮಂಡ್‌, ಫ್ಯಾಂಟಸಿ ಇಂಕ್‌, ಎ ಜಾಫೆ ಕಂಪನಿಗಳಿಗೆ ರಿಚರ್ಡ್‌ ಲೆವಿನ್‌ರನ್ನು ಟ್ರಸ್ಟಿಯಾಗಿ ನೇಮಿಸಿತ್ತು. ಲೆವಿನ್‌ ಅವರು ನೀರವ್‌ ಮೋದಿ ಮತ್ತವರ ಸಹಾಯಕರಾದ ಮಿಹಿರ್‌ ಭನ್ಸಾಲಿ, ಅಜಯ್‌ ಗಾಂಧಿಯವರ ವಿರುದ್ಧ ತೀವ್ರತರ ಆರೋಪಗಳನ್ನು ಮಾಡಿದ್ದರು.

ಹಾಗೆಯೇ ಅವರಿಗೆ ಸಾಲ ನೀಡಿರುವ ವ್ಯಕ್ತಿಗಳಿಗೆ ಕನಿಷ್ಠ 15 ಮಿಲಿಯನ್‌ ಡಾಲರ್‌ (112 ಕೋಟಿ ರೂ.) ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಇದನ್ನು ರದ್ದುಗೊಳಿಸುವಂತೆ ನೀರವ್‌ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ :“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next