Advertisement

ನಿಫಾಗೆ ಮತ್ತೂಂದು ಬಲಿ

06:00 AM May 25, 2018 | Team Udayavani |

ಕಲ್ಲಿಕೋಟೆ: ಮಾರಣಾಂತಿಕ ನಿಫಾ ವೈರಸ್‌ಗೆ ಕೇರಳದಲ್ಲಿ ಮತ್ತೂಬ್ಬ ವ್ಯಕ್ತಿ ಬಲಿ ಯಾಗಿದ್ದು, ಈವರೆಗೆ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆ 11ಕ್ಕೇರಿದೆ. ಸುಮಾರು 160 ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗೆ ಒಳಪಡಿಸಲಾ ಗಿದ್ದು, 13 ಪ್ರಕರಣಗಳಲ್ಲಿ ಸೋಂಕು ತಗಲಿ ರುವುದು ದೃಢಪಟ್ಟಿದೆ. ಈ ಪೈಕಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಕಲ್ಲಿಕೋಟೆ ಜಿಲ್ಲಾ ವೈದ್ಯಕೀಯ ಅಧಿಕಾರಿ ಡಿ. ಜಯಶ್ರೀ ತಿಳಿಸಿದ್ದಾರೆ.

Advertisement

ಈ ವೈರಸ್‌ನಿಂದಾಗಿ ಮೊದಲು ಸಾವಿಗೀಡಾದ ಸಹೋದರರ ತಂದೆ ಗುರುವಾರ ಬೆಳಗ್ಗೆ ಮೃತರಾಗಿದ್ದಾರೆ. ಕಳೆದೊಂದು ವಾರದಿಂದ ವಿ. ಮೂಸಾ (61) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಗುರುವಾರ ಬೆಳಗ್ಗೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೇ ವೇಳೆ, ನಿಫಾ ವೈರಸ್‌ ಹರಡು ವುದನ್ನು ತಡೆಯಲು ಕೈಗೊಂಡ ಮುನ್ನೆ ಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಗುರುವಾರ ಸಿಎಂ ಪಿಣ ರಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿದೆ. ಜತೆಗೆ, ಈ  ಬಗ್ಗೆ ಚರ್ಚಿಸಲು ಶುಕ್ರವಾರ ಸರ್ವಪಕ್ಷಗಳ ಸಭೆಯನ್ನೂ ಕರೆಯಲಾಗಿದೆ.

ಹಿಮಾಚಲದಲ್ಲಿ ಬಾವಲಿಗಳ ಶವ ಪತ್ತೆ
ಕೇರಳದಲ್ಲಿ ಆತಂಕ ಸೃಷ್ಟಿಸಿರುವ ನಿಫಾವೈರಸ್‌ ಇದೀಗ ಹಿಮಾಚಲ ಪ್ರದೇಶದಲ್ಲೂ ಭೀತಿಗೆ ಕಾರಣವಾಗಿದೆ. ಇಲ್ಲಿನ ಶಾಲೆಯೊಂದರಲ್ಲಿ ಗುರುವಾರ ಸತ್ತು ಬಿದ್ದಿದ್ದ 18 ಬಾವಲಿಗಳು ಪತ್ತೆಯಾಗಿವೆ. ಇದೀಗ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದು, ನಿಫಾ ಸೋಂಕು ಹರಡದಂತೆ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಘೋಷಿಸಿದೆ. ಸತ್ತ ಬಾವಲಿಗಳ ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ. ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next