Advertisement

Nimika Ratnakar; ಬೋಝೋ ಬಂದ ಮೇಲೆ ಖುಷಿ ಹೆಚ್ಚಿದೆ..: ನಿಮಿಕಾ ರತ್ನಾಕರ್

03:02 PM Sep 14, 2023 | Team Udayavani |

ನನ್ನ ಮುದ್ದು ಮರಿಯ ಹೆಸರು ಬೋಝೋ. ಈಗ ಅವನಿಗೆ ಆರು ವರ್ಷ. ವೈಟಿ ರಿಟ್ರಿವರ್‌ ಜಾತಿ. ಬೋಝೋ ನಮ್ಮ ಫ್ಯಾಮಿಲಿ ಮೆಂಬರ್‌ ಆಗುವ ಮುನ್ನ ನನಗೆ ನಾಯಿಗಳನ್ನು ಮುಟ್ಟಿಯೂ ಅಭ್ಯಾಸವಿರಲಿಲ್ಲ. ಕೋವಿಡ್‌ ಸಮಯದಲ್ಲಿ ನನ್ನ ಫ್ರೆಂಡ್‌ ಮಂಗಳೂರಿನಿಂದ ಬೋಝೋನನ್ನು ಬೆಂಗಳೂರಿಗೆ ಕಳುಹಿಸಿದರು.

Advertisement

ಮಂಗಳೂರಿನ ಆ ತಾಪಮಾನಕ್ಕೆ ಬೋಝೋ ಸುಸ್ತಾಗುತ್ತಿದ್ದ. ವಾಕಿಂಗ್‌ ಬೇರೆ ಕರೆದುಕೊಂಡು ಹೋಗುವಂತಿರಲಿಲ್ಲ. ಹಾಗಾಗಿ, ಬೆಂಗಳೂರಲ್ಲಿ ಕೂಲ್‌ ಆಗಿ ಇರಲಿ ಎಂದು ಕಳುಹಿಸಿದ್ದರು.

ಆರಂಭದಲ್ಲಿ ಬೋಝೋನನ್ನು ಹೇಗೆ ಮೆಂಟೇನ್‌ ಮಾಡೋದು ಎಂಬ ಭಯ ಇತ್ತು. ಆದರೆ, ಆತ ಬೇಗನೇ ಹೊಂದಿಕೊಂಡ. ಈಗ ಆತ ನನ್ನ ಮುದ್ದು ಮರಿ. ಮೂರು ತಿಂಗಳು ಬೆಂಗಳೂರಿನಲ್ಲಿ ಹಾಗೂ ಉಳಿದಂತೆ ಮಂಗಳೂರಿನಲ್ಲಿರುತ್ತಾನೆ.

ನಿಮಿಕಾ ರತ್ನಾಕರ್‌

Advertisement

Udayavani is now on Telegram. Click here to join our channel and stay updated with the latest news.

Next