Advertisement

ನಿಮ್ಹಾನ್ಸ್‌ 24ನೇ ಘಟಿಕೋತ್ಸವ ನಾಳೆ

11:20 PM Sep 14, 2019 | Team Udayavani |

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) 24ನೇ ಘಟಿಕೋತ್ಸವ ಸೆ.16ರ ಮಧ್ಯಾಹ್ನ 3ಕ್ಕೆ ನಿಮ್ಹಾನ್ಸ್‌ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘಟಿಕೋತ್ಸವ ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

ಘಟಿಕೋತ್ಸವ ಹಿನ್ನೆಲೆ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರ್‌, 24ನೇ ಘಟಿಕೋತ್ಸವದಲ್ಲಿ 176 ಸ್ನಾತಕೋತ್ತರ ಪದವೀಧರರು ವಿವಿಧ ಪದವಿ ಮತ್ತು ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. 14 ಮಂದಿಗೆ ಪ್ರಶಂಸನೀಯ ಪ್ರಶಸ್ತಿ ನೀಡಲಾಗುತ್ತದೆ. ಜತೆಗೆ “ಯೋಗ ಫಾರ್‌ ಡಿಪ್ರಶನ್‌’ ಎಂಬ ಕೃತಿಯ 2ನೇ ಆವೃತ್ತಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.

ಹೊಸ ತಂತ್ರಜ್ಞಾನಗಳ ಬಳಕೆ ದೃಷ್ಟಿಯಿಂದ ನಿಮ್ಹಾನ್ಸ್‌ ವಿವಿಧ ಡಿಜಿಟಲ… ಸೇವೆ ಆರಂಭಿಸಿದೆ. ದೇಶಾದ್ಯಂತ ಗುಣಮಟ್ಟದ ಮಾನಸಿಕ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಅಧಿಕಾರಿಗಳು, ಮನಃಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ದಾದಿಯರಿಗೆ ತರಬೇತಿ ನೀಡಲು ನಿಮ್ಹಾನ್ಸ್‌ ಡಿಜಿಟಲ್ ಅಕಾಡೆಮಿ (ಎನ್‌ಡಿಎ) ಸ್ಥಾಪಿಸಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಸಹಯೋಗದೊಂದಿಗೆ “ನಿಮ್ಹಾನ್ಸ್‌ ಇ-ಪ್ರಿಸ್ಕ್ರಿಪ್ಶನ್‌’ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಚಿಕಿತ್ಸೆ ಪಡೆದ ರೋಗಿಗಳಿಗೆ ಅಗತ್ಯ ಔಷಧಿಗಳ ಹೆಸರನ್ನು ಅವರ ಮೊಬೈಲ್‌ಗೆ ಸಂದೇಶ ಮೂಲಕ ಕಳಿಸಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next