Advertisement

ದುಬಾರಿಯಾಗಿದೆ ಲಿಂಬೆ ಹಣ್ಣು! ಒಂದು ಕೆಜಿ ಲಿಂಬೆ ಹಣ್ಣಿನ ಬೆಲೆ ಎಷ್ಟು ಗೊತ್ತಾ? 

12:34 AM Apr 12, 2022 | Team Udayavani |

ಲಕ್ನೋ: ದೇಶದಲ್ಲಿ ಎಲ್ಲ ವಸ್ತುಗಳ ಬೆಲೆಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಇದೀಗ ಹೊಸ ಸುದ್ದಿಯೊಂದು ಉತ್ತರಪ್ರದೇಶದ ಲಕ್ನೋದಿಂದ ಕೇಳಿಬಂದಿದೆ.

Advertisement

ಅಲ್ಲೀಗ ಒಂದು ಕೆಜಿ ಲಿಂಬೆ ಹಣ್ಣಿನ ಬೆಲೆ 325 ರೂ. ಹಾಗೆಯೇ ಒಂದು ಲಿಂಬೆ ಹಣ್ಣಿಗೆ 13 ರೂ. ಗಳಾಗಿದೆ. ಇದರ ಪರಿಣಾಮ ಸಾಮಾನ್ಯ ಜನರು ಈ ಬಿಸಿಯ ಬೇಗೆಯಲ್ಲಿ ಪಾನಕ ಕುಡಿಯಲು ಯೋಚಿಸುವಂತಾಗಿದೆ.

ಲಿಂಬೆಯಲ್ಲಿ ಹುಳಿಯೂ ಇರುವುದರಿಂದ ಮಸಾಲ ಅಡುಗೆಗಳಿಗೆ ಇದು ಬಳಕೆಯಾಗುತ್ತದೆ. ಹಾಗಾಗಿ ಇಲ್ಲೂ ಇದರ ಬಳಕೆ ದುಬಾರಿಯೆನಿಸಿದೆ. ಹೊಟೇಲ್‌ಗ‌ಳಲ್ಲಿ ಊಟ ಮಾಡಿ ಕೈತೊಳೆದುಕೊಳ್ಳುವಾಗ ಲಿಂಬೆಯ ಹೋಳು ಹಾಕಿದ ನೀರನ್ನು ನೀಡ ಲಾಗುತ್ತಿತ್ತು. ಇನ್ನು ಮುಂದೆ ಜನ ಇದಕ್ಕೂ ಹಣ ಪಾವತಿಸಬೇಕಾಗಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next