Advertisement

ಕಾಂಗ್ರೆಸ್ ಪಕ್ಷ ಉಳಿಸಿ ಬೆಳೆಸಿ : ಹಿರಿಯ ಮುಖಂಡ ನೀಲಕಂಠ ಮುತ್ತೂರ

08:04 PM Dec 28, 2021 | Team Udayavani |

ಬನಹಟ್ಟಿ : ಕಾಂಗ್ರೆಸ್ ಪಕ್ಷ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಇದು ಆಲದ ಮರವಿದ್ದಂತೆ ಅದನ್ನು ವೈಯಕ್ತಿಕವಾಗಿ ಬಳಸಿಕೊಳ್ಳದೇ ನಾವೆಲ್ಲರು ಅದರ ಬೇರುಗಳಾಗಿ ಒಗ್ಗಟ್ಟಾಗಿ ಸಂಘಟಿಸಬೇಕು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಉಳಿಸಿ ಬೆಳೆಸಿ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ನೀಲಕಂಠ ಮುತ್ತೂರ ಹೇಳಿದರು.

Advertisement

ಅವರು ಮಂಗಳವಾರ ಬನಹಟ್ಟಿಯಲ್ಲಿರುವ ತೇರದಾಳ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕಾಂಗ್ರೆಸ್ 136ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 136 ವರ್ಷಗಳ ಏಕತೆ, ನ್ಯಾಯ, ಸಮಾನತೆ, ಅಹಿಂಸೆ ಹಾಗು ಸ್ವಾತಂತ್ರ್ಯದ ಜತೆ ನಾವಿಂದು ಕಾಂಗ್ರೆಸ್ಸನ 136ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದೇವೆಂದು ತಿಳಿಸಿದರು.

ಕ್ಷೇತ್ರದಲ್ಲಿ ಪಕ್ಷ ಯಾರಿಗೆ ಟಿಕೆಟ್ ನಿಡುತ್ತದೆಯೋ ಅವರಿಗೆ ಬೆಂಬಲವಾಗಿ ನಿಲ್ಲೋಣ. ಅದನ್ನು ಬಿಟ್ಟು ವಯಕ್ತಿಕವಾಗಿ ನನ್ನನ್ನು ಹರಿಸಿ ಎನ್ನುವ ಬದಲು ಕಾಂಗ್ರೆಸ್‌ಗೆಲ್ಲಿಸಿ ಎಂದು ಹೇಳುವುದನ್ನು ಯುವ ನಾಯಕರು ರೂಢಿಸಿಕೊಳ್ಳಬೇಕು. ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡೋಣ. ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಯಾಗಿರುವುದು ತಪ್ಪಲ್ಲ. ಕಾಂಗ್ರೆಸ್ ಗೆಲ್ಲಿಸುವತ್ತ ಗಮನ ಹರಿಸಿ, ಕಾಂಗ್ರೆಸ್ ಹೈಕಮಾಂಡ ಸೂಚಿಸುವ ವ್ಯಕ್ತಿಯನ್ನು ಗೆಲ್ಲಿಸಲು ನಾವೆಲ್ಲ ಸಿದ್ಧರಾಗೋಣ. ರಾಷ್ಟç ಮತ್ತು ದೇಶಪ್ರೇಮವನ್ನು ಕಲಿಸಿದವರು ಕಾಂಗ್ರೆಸ್‌ನವರು ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸುವಂತಹ ಕೆಲಸವನ್ನು ನಾವೆಲ್ಲ ಮಾಡೋಣ ಎಂದರು.

ಕಾಂಗ್ರೆಸ್ ಮುಖಂಡ ಷಣ್ಮುಖಪ್ಪ ಉಳ್ಳಾಗಡ್ಡಿ ಮಾತನಾಡಿ, ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಆಡಳಿತ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರನ್ನು ಪರದೇಶದವರಂತೆ ಕಾಣುತ್ತಿದ್ದಾರೆ. ಅವರು ನಮ್ಮ ಮುಕ್ತ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಇರಬಾರದು ಎನ್ನುವಂತೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಕೆಸರಾಟ ನಡೆಸಿದ್ದಾರೆ ನಮ್ಮ ನಾಯಕರನ್ನು ಹತ್ತಿಕಲು ಪ್ರಯತ್ನಿಸುತ್ತಿದ್ದಾರೆ ಆದರೆ ನಮ್ಮ ನಾಯಕರು ಬಲಿಷ್ಟರಾಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಎಲ್ಲಾ ಜಾತೀಯ ಜನ ನೆಮ್ಮದಿಯಿಂದ ಇರಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದರು.

ಇದನ್ನೂ ಓದಿ : ಅಬಕಾರಿ ಅಧಿಕಾರಿಗಳ ದಾಳಿ : ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 8.280 ಲೀ. ಮದ್ಯ ವಶ

Advertisement

ಸಂವಿಧಾನ ವಿರುದ್ಧ ಕಾರ್ಯಗಳನ್ನು ನಡೆಸುತ್ತಿರುವ ಬಿಜೆಪಿಗೆ ಕಾನೂನು ಆಡಳಿತಕ್ಕೆ ಬೆಲೆ ನೀಡುತ್ತಿಲ್ಲ. ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಕಾಂಗ್ರೆಸ್‌ನ ಪಾತ್ರ ಹಿರಿದು, ಸ್ವಾತಂತ್ರ್ಯಾ ನಂತರದ 6 ದಶಕಗಳ ಶ್ರಮದಿಂದಲೇ ಇಂದು ದೇಶ ಇಷ್ಟೊಂದು ಪ್ರಮಾಣದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ರಾಜ್ಯದಲ್ಲಿ ಮುಂದೆಂದೂ ಬಿಜೆಪಿ ಆಡಳಿತಕ್ಕೆ ಬರಬಾರದು. ಜನಸಾಮಾನ್ಯರ ಸಮಸ್ಯೆ ಹಾಗು ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಇಂದಿನ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ ಎಂದರು.

ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ನಜೀರ ಕಂಗನೋಳಿ, ರಬಕವಿ-ಬನಹಟ್ಟಿ-ಮಹಾಲಿಂಗಪೂರ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ತೇರದಾಳ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ರಾಜ್ಯ ಉಪಾಧ್ಯಕ್ಷ ಬಸವರಾಜ ಕೊಕಟನೂರ, ಶ್ರೀಪಾದ ಗುಂಡಾ, ಮಾಳುಹಿಪ್ಪರಗಿ, ಸತ್ಯಪ್ಪ ಮಗದುಮ, ಶ್ರೀಶೈಲ ಮೇಣಿ, ಸಂಗಮೇಶ ಮಡಿವಾಳ, ಬಸವರಾಜ ಗುಡೋಡಗಿ, ಓಂಪ್ರಕಾಶ್ ಮನಗೂಳಿ, ಶಂಕರ ಕೆಸರಗೊಪ್ಪ, ಹೂಮಾಯೂನ ಮುಲ್ಲಾ,ಶೇಖರ ಹಕಲದಡ್ಡಿ, ಸದಾಶಿವ ನಾಯಕ, ನಿಜಗುಣಿ ಶಿರಹಟ್ಟಿ, ಸದಾಶಿವ ಗೋಂದಕರ, ಕಿರಣ ಕರಲಟ್ಟಿ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next