Advertisement

ನಿಕ್ಷಯ್‌ಮಿತ್ರಗೆ 103 ದಾನಿಗಳು ನೋಂದಣಿ

12:49 PM May 20, 2023 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗವನ್ನು ತಡೆಗಟ್ಟಲು ನಿಕ್ಷಯ್‌ ಮಿತ್ರ ಯೋಜನೆ ಜಾರಿಗೆ ತರಲಾಗಿದೆ. ನಿಕ್ಷಯ್‌ ದತ್ತಾಂಶದ ಮೂಲಕ ನೋಂದಾ ಯಿಸಿಕೊಂಡು ರೋಗಿ ಗಳಿಗೆ ನೆರವಾಗುವ ಅವಕಾಶ ನೀಡಲಾಗಿತ್ತು. ಇದರ ಮೂಲಕ 103 ಮಂದಿ ನೊಂದಾಯಿಸಿಕೊಂಡಿದ್ದಾರೆ.

Advertisement

ಪ್ರಧಾನಮಂತ್ರಿ ಟಿ.ಬಿ.ಮುಕ್ತ ಭಾರತ ಅಭಿಯಾನದಡಿ ಟಿಬಿಯಿಂದ ಬಳಲುತ್ತಿರುವ ಸಹಾಯಕ್ಕೆ ನಿಕ್ಷಯ್‌ ಮಿತ್ರನಾಗಿ ಯಾವುದೆ ವ್ಯಕ್ತಿ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಸಂಸ್ಥೆಗಳು ನಿಕ್ಷಯ್‌ ಮಿತ್ರನಾಗಬಹುದು. http//sommunity.support.nikshay.in kq  ಲಾಗಿನ್‌ ಆಗಿ ನಿಕ್ಷಯ್‌ ಮಿತ್ರನಾಗಿ ನೊಂದಾಯಿಸಲು ಅರ್ಜಿ ಭರ್ತಿ ಮಾಡಿ ಸಹಾಯ ಮಾಡಬಹುದಾಗಿದೆ. ರೋಗಿಗೆ ನ್ಯೂಟ್ರಿಷನ್‌ ಕಿಟ್‌, ವೆಕೇಷನಲ್‌ ಸಪೋರ್ಟ್‌ ಒದಗಿಸ ಬಹುದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಎಷ್ಟು ಮಂದಿ ಯನ್ನು ಬೇಕಾದರೂ ದತ್ತು ಪಡೆದುಕೊಳ್ಳಬಹುದು.

ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ: ಕ್ಷಯರೋಗ ಶಾಪ ಎಂದು ಅವರನ್ನು ದೂರವಿಡುವ ಸಮಾಜ ಈಗ ಬದಲಾಗುತ್ತಿದೆ. ಜಿಲ್ಲೆಯಲ್ಲಿ ಕ್ಷಯರೋಗಿ ಗಳಿಗೆ ನೆರವು ನೀಡಲು ದಾನಿಗಳು ಮುಂದಾಗುತ್ತಿದ್ದಾರೆ. ದೊಡ್ಡ ಬಳ್ಳಾ ಪುರ ತಾಲೂಕಿನಲ್ಲಿ ಇ ಕ್ಷಯ ತಂತ್ರಾಂಶ ಬರುವ ಮುನ್ನ ದಾನಿಗಳು ನೆರವು ನೀಡುತ್ತಿದ್ದಾರೆ. ಇಲಾಖೆ ಕೂಡ ಅವರಿಗೆ ಸನ್ಮಾನ ಮಾಡಿ ಅವರಿಗೆ ಪ್ರೋತ್ಸಾಹ ನೀಡುತ್ತಾ ಬರು ತ್ತಿದ್ದು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ನೀಡು ತ್ತಿದೆ. ಕ್ಷಯ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಕ್ಷಯ್‌ ಮಿತ್ರ ಯೋಜನೆಯಡಿ ರೋಗಿ ಗಳನ್ನು ದತ್ತು ಪಡೆದು ಪೌಷ್ಟಿಕ ಆಹಾರ ನೀಡುವ ವಿನೂತನ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂ ಭಿಸಿತ್ತು. ಇದರಿಂದ 700ಕ್ಕೂ ಹೆಚ್ಚು ರೋಗಿಗಳು ಅನುಕೂಲ ಪಡೆದುಕೊಂಡಿದ್ದಾರೆ ಹಾಗೂ ಗುಣ ಮುಖರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ಅನುಕೂಲವಾಗುವ ಸಾಧ್ಯತೆಗಳಿವೆ.

ಕ್ಷಯರೋಗಿಗಳಿಗೆ ಔಷಧದೊಂದಿಗೆ ಪೌಷ್ಟಿಕ ಆಹಾರ ಮುಖ್ಯ: ಕ್ಷಯರೋಗಿಗಳಿಗೆ ಔಷಧದೊಂ ದಿಗೆ ಪೌಷ್ಟಿಕ ಆಹಾರ ಮುಖ್ಯ. ಔಷಧಿಗೆ ಗುಣ ಹೊಂದುವ ರೋಗಿಗಳನ್ನು ನಿಕ್ಷಯ್‌ ಮಿತ್ರ ಯೊಜನೆಯಡಿ ದತ್ತು ಪಡೆಯಬಹುದಾಗಿದೆ. ಈ ರೋಗಿಗಳಲ್ಲಿ ರೋಗದಿಂದ ಕುಗ್ಗಿದ್ದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಅತ್ಯವಶ್ಯಕ ವಾದ ಪೌಷ್ಟಿಕ ಆಹಾರ ಪೂರೈಸುವುದು ರೋಗಿಗಳಿಗೆ ಅತ್ಯವಶ್ಯಕ. ಪೌಷ್ಟಿಕ ಆಹಾರಗಳು ನೀಡುವುದೇ ಈ ಯೋಜನೆಯ ಮುಖ್ಯ ಉದ್ದೇಶ. ದಾನ ಪಡೆದವರು ರೋಗಿಗಲಿಗೆ ಕನಿಷ್ಠ 6 ತಿಂಗಳವರೆಗೂ ಪೌಷ್ಟಿಕ ಆಹಾರ ನೀಡುವಂತೆ ನೋಡಿಕೊಳ್ಳಬೇಕು. ಗರಿಷ್ಠ 1 ವರ್ಷವಾದರೂ ನೋಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 103 ಮಂದಿ ನಿಕ್ಷಯ್‌ ಮಿತ್ರರೊಂದಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರು ಪ್ರಸ್ತುತ 468 ರೋಗಿಗಳನ್ನು ದತ್ತು ಪಡೆದು ಕೊಂಡಿದ್ದಾರೆ. ಕಳೆದ 1 ವರ್ಷದಲ್ಲಿ 730 ಮಂದಿಗೆ ನೆರವಾಗಿದ್ದಾರೆ. ಕ್ಷಯ ರೋಗ ಕಂಡು ಬಂದವರು ಸಮೀಪದ ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಮತ್ತು ಆರೋಗ್ಯ ಕೇಂದ್ರ ಗಳನ್ನು ಪರಿಕ್ಷೆ ಮಾಡಿಸಿ ಕೊಳ್ಳಬೇಕು. 2 ವಾರಕ್ಕಿಂತ ಹೆಚ್ಚು ಕೆಮ್ಮು ಇದ್ದರೆ ಕಫ‚‌ದಲ್ಲಿ ರಕ್ತ ಕಂಡು ಬಂದರೆ ಪರೀಕ್ಷೆ ಮಾಡಿಸಿ ಕೊಳ್ಳಬೇಕು ಎಂದು ಹೇಳಿದರು.

ಕ್ಷಯರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ಕ್ಷಯರೋಗಿಗಳಿಗೆ ಔಷಧಿ ಜೊತೆ ಪೌಷ್ಟಿಕ ಆಹಾರ ಅತ್ಯವಶ್ಯಕವಾಗಿರುತ್ತದೆ. ಕ್ಷಯರೋಗಿಗಳಿಗೆ ಅನುಕೂಲವಾಗಲು ಕ್ಷಯ ನಿಕ್ಷಯ್‌ ಮಿತ್ರ ಯೋಜನೆ ಜಾರಿ ಬಂದಿದೆ. 103 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇದುವರೆವಿಗೂ 738 ಮಂದಿಗೆ ದಾನಿಗಳ ಸಹಕಾರದಿಂದ ನೆರವು ನೀಡಲಾಗಿದೆ. – ಡಾ.ನಾಗೇಶ್‌, ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next