ಕೌಲಾಲಂಪುರ: ಅಂಡರ್-19 ವನಿತಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ 119 ರನ್ನುಗಳ ಬೃಹತ್ ಅಂತರದಿಂದ ಸ್ಕಾಟ್ಲೆಂಡ್‌ಗೆ ಸೋಲುಣಿಸಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 164 ರನ್ ಗಳಿಸಿದರೆ, ಸ್ಕಾಟ್ಲೆಂಡ್ 18.5 ಓವರ್‌ಗಳಲ್ಲಿ ಬರೀ 45 ರನ್ನಿಗೆ ಆಲೌಟ್ ಆಯಿತು.
ಭಾರತದ ತಿೃಷಾ ಜಿ. (26), ಸಾನಿಕಾ ಚಲ್ಕೆ (17), ನಾಯಕಿ ನಿಕಿ ಪ್ರಸಾದ್ (25) ಮತ್ತು ಕಮಲಿನಿ (32) ಬ್ಯಾಟಿಂಗ್ ನಿವೃತ್ತಿಯಾಗಿ ಉಳಿದವರಿಗೆ ಅವಕಾಶ ಕೊಟ್ಟರು. ಶಬ್ನಮ್ ಶಕಿಲ್, ವೈಷ್ಣವಿ ಶರ್ಮ ಮತ್ತು ಸೋನಮ್ ಯಾದವ್ ತಲಾ 2 ವಿಕೆಟ್ ಉರುಳಿಸಿದರು.
2ನೇ ಆವೃತ್ತಿಯ ಪಂದ್ಯಾವಳಿ ಜ. 18ರಿಂದ ಫೆ. 2ರ ತನಕ ಮಲೇಷ್ಯಾದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ 2023ರ ಮೊದಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗಿ ಮೂಡಿಬಂದಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ 7 ವಿಕೆಟ್ ಸೋಲುಣಿಸಿತ್ತು.