Advertisement

ನಿಖಿಲ್‌ರನ್ನು ಸಿದ್ದರಾಮಯ್ಯನವರೇ ಸೋಲಿಸ್ತಾರೆ

12:14 PM Mar 25, 2019 | Lakshmi GovindaRaju |

ಹರಪನಹಳ್ಳಿ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದಲ್ಲಿ ಕಣ್ಣೀರಿನ ಬಟನ್‌ಗಳಿವೆ. ಅದನ್ನು ಒತ್ತಿ ಬಿಟ್ಟರೆ ನಲ್ಲಿಯಲ್ಲಿ ನೀರು ಬರೋದಕ್ಕಿಂತ ಜೋರಾಗಿ ಕಣ್ಣೀರು ಬರುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ಲೇವಡಿ ಮಾಡಿದರು.

Advertisement

ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆ ಚುನಾವಣೆಯಲ್ಲಿ ಅತ್ತರು, ಲೋಕಸಭೆ ಚುನಾವಣೆ ವೇಳೆ ದೇವೇಗೌಡರು, ಪ್ರಜ್ವಲ್‌, ಭವಾನಿ, ರೇವಣ್ಣ ಎಲ್ಲರೂ ಅಳುತ್ತಿದ್ದಾರೆ.

ಹಾಸನ ಕೇತ್ರದಲ್ಲಿ ಮೊಮ್ಮಗನನ್ನು ಗೆಲ್ಲಿಸಲು ಇಷ್ಟೆಲ್ಲಾ ನಾಟಕವಾಡುತ್ತಿದ್ದಾರೆ ಎಂದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಜೆಡಿಎಸ್‌ನವರು ಸೋಲಿಸಿದ್ದನ್ನು ಸಿದ್ದರಾಮಯ್ಯ ಮರೆತಿಲ್ಲ. ಆ ಕೋಪವನ್ನು ಮಂಡ್ಯದಲ್ಲಿ ನಿಖಿಲ್‌ನನ್ನು ಸೋಲಿಸುವ ಮೂಲಕ ಟಗರು (ಸಿದ್ದರಾಮಯ್ಯ) ಡಿಚ್ಚಿ ಹೊಡೆದು ತೋರಿಸುತ್ತಾರೆ ಎಂದರು.

ಸಮಾರಂಭವೊಂದರಲ್ಲಿ ಕುಮಾರಸ್ವಾಮಿ ಮಗನಿಗೆ ಎಲ್ಲಿದ್ದೀಯಪ್ಪಾ ಎಂದು ಕೇಳಿದ್ದು ಭಾರೀ ವೈರಲ್‌ ಆಗಿದೆ. ಆದರೆ ಏ.23ರ ನಂತರ ನಿಜಕ್ಕೂ ಎಲ್ಲಿದ್ದಾರೆ ಎಂದು ಹುಡುಕಿಕೊಳ್ಳಬೇಕಾಗುತ್ತೆ. ಇವರಿಗೆ ಸಿದ್ದರಾಮಯ್ಯ ಅವರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next