Advertisement

ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಸಂಭ್ರಮ : ಹೆಸರಿನಲ್ಲೇನಿದೆ ವಿಶೇಷ ?

08:23 PM Jun 08, 2022 | Team Udayavani |

ಬೆಂಗಳೂರು: ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಪುತ್ರನ ನಾಮಕರಣ ಸಮಾರಂಭ ಬುಧವಾರ ನಡೆಯಿತು. ಪುತ್ರನಿಗೆ ಹಿರಿಯರ ಸಲಹೆಯಂತೆ ಅವ್ಯನ್ ದೇವ್ ಎನ್. ಕೆ. ಎಂದು ಹೆಸರಿಡಲಾಗಿಡೆ.

Advertisement

ಜೆ.ಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಬಳಿಕ ಸಂಭ್ರಮದ ಸಮಾರಂಭದಲ್ಲಿ ನಾಮಕರಣ ಮಾಡಲಾಗಿದೆ. ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ , ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿ ಕುಟುಂಬ ಸದಸ್ಯರು ಮತ್ತು ಆಪ್ತರು ಪಾಲ್ಗೊಂಡಿದ್ದರು.

ನಾಮಕರಣ ಶಾಸ್ತ್ರದ ಬಳಿಕ ಪತ್ನಿ ರೇವತಿ ಅವರೊಂದಿಗೆ ಸುದ್ದಿಗಾರರೊಂದಿಗೆ ಪುತ್ರನನ್ನು ಪರಿಚಯಿಸಿದರು. ಅವ್ಯನ್ ದೇವ್ ಎನ್ ಕೆ ಎಂದು ಹೆಸರಿಡಲಾಗಿಡೆ. ಅವ್ಯನ್ ಎಂದರೆ ದೇವರು, ವಿಶೇಷವಾಗಿ ವಿಷ್ಣು ಮತ್ತು ಗಣೇಶನನ್ನು ಕರೆಯುತ್ತಾರೆ, ಹಿರಿಯರು , ಕುಟುಂಬ ಸದಸ್ಯರ ಸಲಹೆಯಂತೆ ನಾಮಕರಣ ಮಾಡಲಾಗಿದೆ ಎಂದರು.

2021 ರ ಸೆಪ್ಟೆಂಬರ್ ತಿಂಗಳಿನಲ್ಲಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ 9 ತಿಂಗಳು ತುಂಬಿದ ಬಳಿಕ ನಾಮಕರಣ ಶಾಸ್ತ್ರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next