Advertisement

ನಿಖೀಲ್‌ಕುಮಾರ್‌ಗೆ ರಿಯ ನಲವಾಡೆ ನಾಯಕಿ

11:45 AM Apr 23, 2017 | |

“ಜಾಗ್ವಾರ್‌’ ನಂತರ ನಿಖೀಲ್‌ ಕುಮಾರ್‌ ಅಭಿನಯದ ಎರಡನೆಯ ಚಿತ್ರದ ಸ್ಕ್ರಿಪ್ಟ್ ಪೂಜೆ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಚಿತ್ರಕ್ಕೆ ಚಾಲನೆ ಸಿಕ್ಕರೂ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿರಲಿಲ್ಲ. ಇದೀಗ ಚಿತ್ರಕ್ಕೆ ರಿಯ ನಲವಾಡೆ ಎಂಬ ಹೊಸ ಹುಡುಗಿ ಆಯ್ಕೆಯಾಗಿದ್ದಾರೆ. 

Advertisement

ಮೂಲತಃ ಬೆಳಗಾವಿಯವರಾದ ರಿಯ, 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರಂತೆ. ಇತ್ತೀಚೆಗೆ ನಡೆದ ಟ್ಯಾಲೆಂಟ್‌ ಹಂಟ್‌ ನ್ಯಾಷನಲ್‌ ಫ್ರೆಶ್‌ ಫೇಸ್‌ ಸ್ಪರ್ಧೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸುವುದರ ಜೊತೆಗೆ ಗೆದ್ದಿದ್ದಾರಂತೆ. ರೂಪದರ್ಶಿಯಾದ ಅವರು ಭರತನಾಟ್ಯ ಹಾಗೂ ಪಾಶ್ಚತಯ ನೃತ್ಯ ತರಬೇತಿಯನ್ನೂ ಪಡೆದಿದ್ದಾರೆ. ಬೆಂಗಳೂರಿನ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದುತ್ತಿರುವ ರಿಯ, ಈಗ ಈ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ.

ಮೇ 15ರಿಂದ ಪ್ರಾರಂಭವಾಗಲಿರುವ ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಈ ಚಿತ್ರವನ್ನೂ ಮಾಜಿ ಮುಖ್ಯಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ಮಿಸಲಿದ್ದು, ಇದು ಚೆನ್ನಾಂಬಿಕಾ ಪಿಕ್ಚರ್ನ ಏಳನೇ ಚಿತ್ರವಾಗಲಿದೆ. ಚಿತ್ರಕ್ಕೆ ಶ್ರೀಷ ಕೂದುವಳ್ಳಿ ಅವರ ಛಾಯಾಗ್ರಹಣ, ಅರ್ಜುನ್‌ ಜನ್ಯ ಅವರ ಸಂಗೀತ ಮತ್ತು ದೀಪು ಎಸ್‌. ಕುಮಾರ್‌ ಸಂಕಲನವಿರಲಿದೆ. ಮೇ 15ಕ್ಕೆ ಈ ಚಿತ್ರದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next