ಸದ್ಯ ನಿಖಿಲ್ ಕುಮಾರ್ ಚುನಾವಣಾ ಬಿಝಿಯಲ್ಲಿ ಓಡಾಡುತ್ತಿದ್ದಾರೆ. ಈ ನಡುವೆಯೇ ಅವರ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಚಿತ್ರಕ್ಕೆ ಟೈಟಲ್ ಇಟ್ಟಿಲ್ಲ. ಈ ಹೊಸ ಸಿನಿಮಾವನ್ನು ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಸೇರಿ ನಿರ್ಮಿಸುತ್ತಿದ್ದಾರೆ. ಸುನಿಲ್ ಗೌಡ ಸಹ ನಿರ್ಮಾಪಕರಾಗಿದ್ದಾರೆ.
ಇನ್ನು, ಈ ಚಿತ್ರವನ್ನು ಮನೋಹರ ಎನ್ನುವವರು ನಿರ್ದೇಶಿಸುತ್ತಿ ದ್ದಾರೆ. ಇವರಿಗಿದು ಚೊಚ್ಚಲ ಚಿತ್ರ. ಈ ಹಿಂದೆ “ಜೇಮ್ಸ್’ ಸೇರಿದಂತೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇದೆ. ಈಗ ನಿಖಿಲ್ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಇದನ್ನೂ ಓದಿ:ನೇತಾಜಿಯ ಬಲಿಷ್ಠ ಭಾರತದ ಕನಸನ್ನು ನಾವು ನನಸು ಮಾಡಬೇಕಾಗಿದೆ: ಮೋಹನ್ ಭಾಗವತ್
ಅಂದ ಹಾಗೆ, ಇದು ಆ್ಯಕ್ಷನ್ ಕಂ ಫ್ಯಾಮಿಲಿ ಡ್ರಾಮಾ ಕಥೆಯನ್ನು ಹೊಂದಿದೆಯಂತೆ. ಚುನಾವಣಾ ಕಾವು ಕಡಿಮೆಯಾದ ಬಳಿಕ ಸಿನಿಮಾ ಆರಂಭವಾಗಲಿದೆಯಂತೆ.
Related Articles
ಅಂದಹಾಗೆ, ಭಾನುವಾರ (ಜ.22) ನಿಖಿಲ್ ತಮ್ಮ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿ ಕುಟುಂಬ ಹಾಗೂ ಅಭಿಮಾನಿಗಳ ಜೊತೆ ಆಚರಿಸಿದ್ದಾರೆ.
ಈಗಾಗಲೇ ಜಿ.ಮನೊಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಜೊತೆಯಾಗಿ ಉಪೇಂದ್ರ ನಾಯಕರಾಗಿರುವ “ಯು-ಐ’ ಚಿತ್ರ ನಿರ್ಮಿಸುತ್ತಿದ್ದಾರೆ.