ನವದೆಹಲಿ: ಭಾರತದ ಏಸ್ ಬಾಕ್ಸರ್ ನಿಖತ್ ಜರೀನ್ ಭಾನುವಾರ 50 ಕೆಜಿ ವಿಭಾಗದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು ಸೋಲಿಸುವ ಮೂಲಕ ಎರಡನೇ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ನಿಖತ್ 5-0 ತೀರ್ಪಿನಿಂದ ಟಾಮ್ ಅವರನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಮೇರಿ ಕೋಮ್ ನಂತರ ಎರಡು ಬಾರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ನಿಖತ್ ಪಾತ್ರರಾಗಿದ್ದಾರೆ.
ಶನಿವಾರದಂದು ನಿತು ಘಂಘಾಸ್ (48 ಕೆಜಿ) ಮತ್ತು ಸವೀಟಿ ಬೂರಾ (81 ಕೆಜಿ) ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ್ದರು.
ಆತಿಥೇಯ ಭಾರತವು ಒಲಿಂಪಿಕ್ ಗೆ ಸಜ್ಜಾಗುವುದರೊಂದಿಗೆ ಚಿನ್ನದ ಪದಕಗಳ ವಿಷಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಹೊಂದಿಸುವ ಹಾದಿಯಲ್ಲಿದೆ. 2006 ರ ಆವೃತ್ತಿಯಲ್ಲಿ ಭಾರತವು ನಾಲ್ಕು ಚಿನ್ನವನ್ನು ಗೆದ್ದಿತ್ತು, ಇದು ಬೆಳ್ಳಿ ಸೇರಿದಂತೆ ಎಂಟು ಪದಕಗಳೊಂದಿಗೆ ದೇಶದ ಅತ್ಯುತ್ತಮ ಪ್ರದರ್ಶನವಾಗಿತ್ತು.