ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಮತ್ತು ಮನೀಷಾ ಮೌನ್ ವನಿತಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
Advertisement
ಭಾನುವಾರದ ಪಂದ್ಯದಲ್ಲಿ ನಿಖತ್ ಜರೀನ್ (50 ಕೆಜಿ) ಆಫ್ರಿಕನ್ ಚಾಂಪಿಯನ್, ಆಲ್ಜೀರಿಯಾದ ಬೌಲಾಮ್ ರೌಮಾಯಾ ಅವರನ್ನು 5-0 ಅಂತರದಿಂದ ಕೆಡವಿದರು.
ನಿಖತ್ ಕಳೆದ ಆವೃತ್ತಿಯಲ್ಲಿ ಬಂಗಾರದ ಪದಕ ಜಯಿಸಿದ್ದರು. ಕಳೆದ ಸಲದ ಕಂಚಿನ ಪದಕ ವಿಜೇತೆ ಮನೀಷಾ ಮೌನ್ (57 ಕೆಜಿ) ಆಸ್ಟ್ರೇಲಿಯದ ರಹಿಮಿ ಟೀನಾ ಅವರನ್ನು ಇಷ್ಟೇ ಅಂತರದಿಂದ ಮಣಿಸಿದರು.