Advertisement

ಸಂದರ್ಶನ: ಇಂಡಿಯನ್ ಐಡಲ್ ನಲ್ಲಿ ಮಿಂಚುತ್ತಿರುವ ಮೂಡುಬಿದಿರೆ ಪ್ರತಿಭೆ “ನಿಹಾಲ್ ತಾವ್ರೊ”

10:56 AM Mar 27, 2021 | Team Udayavani |

ಮಣಿಪಾಲ :  ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಫೈನಲ್ ಹಂತದವರೆಗೂ ತಲುಪಿದ್ದ ಮೂಡುಬಿದಿರೆ ಪ್ರತಿಭೆ ನಿಹಾಲ್ ತಾವ್ರೊ. ಈ ಕನ್ನಡದ ಪ್ರತಿಭೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಿಂದಿಯಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡಲ್’ ಕಾರ್ಯಕ್ರಮದಲ್ಲಿ ನಿಹಾಲ್ ಮಿಂಚಿದ್ದಾರೆ. ಟಾಪ್ ಟೆನ್ ಸ್ಪರ್ಧಿಯಾಗಿ ಕನ್ನಡಿಗ ಕಲಾವಿದ ನಿಹಾಲ್ ಆಯ್ಕೆಯಾಗಿದ್ದು, ಉದಯವಾಣಿ ಡಾಟ್ ಕಾಮ್ ನಡೆಸಿದ ಮಾತುಕತೆ ಸಾರಾಂಶ ಇಲ್ಲಿದೆ..

Advertisement

ಗುರುವಿಲ್ಲದೇ ಬೆಳೆದ ಪ್ರತಿಭೆ ನೀವು, ಇದ್ರ ಬಗ್ಗೆ ಏನು ಹೇಳುವಿರಿ :  ಹೌದು, ಆದ್ರೆ ನಮ್ಮ ಮನೆಯವರು, ಸ್ನೇಹಿತರ ಆಶೀರ್ವಾದ ಅಲ್ಲದೆ ನನ್ನ ಅದೃಷ್ಟ ಕೂಡ ಇದೆ. ಎಲ್ಲರೂ ಕೂಡ ಗುರುವಿಲ್ಲದೆ ಬೆಳೆಯಲು ಸಾಧ್ಯವಿಲ್ಲ. ಕೆಲವು ಬಾರಿ ಗುರು ಇದ್ದರೂ ಕೂಡ ಅವರು ಹೇಳಿದ್ದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ಸಾಧನೆ ಅಡಕವಾಗಿರುತ್ತದೆ.

ಲಕ್ಷಾಂತರ ಜನರಿರುವ ವೇದಿಕೆಯನ್ನು ಹೇಗೆ ಎದುರಿಸುತ್ತೀರ : ನಾನು ಕಾರ್ಯಕ್ರಮ ನೀಡಲು ಹೋಗುವಾಗ ನನ್ನದೇ ಆದ ಒಂದು ಕಾನ್ಫಿಡೆನ್ಸ್ ಅನ್ನು ತುಂಬಿಕೊಂಡು ಹೋಗ್ತೇನೆ. ಅದು ಹೊರಗಡೆ ಕಾಣೋದಿಲ್ಲ. ನನ್ನೊಳಗೇ ಅಡಕವಾಗಿರುತ್ತದೆ. ಸಾವಿರ ಜನ ಇರುವ  ವೇದಿಕೆಯಲ್ಲಿ ಹೇಗೆ ಕಾರ್ಯಕ್ರಮ ನೀಡುತ್ತೇನೋ, ಅದೇ ರೀತಿ ಇಬ್ಬರು ಮೂರು ಜನ ಇರುವ ಕಾರ್ಯಕ್ರಮದಲ್ಲೂ ನಾನು ಅದೇ ರೀತಿ ಇರುತ್ತೇನೆ. ಆದ್ರಿಂದ ನನಗೆ ಕಷ್ಟ ಆಗಲ್ಲ.

ನಿಮ್ಮ ವಿದ್ಯಾಭ್ಯಾಸ ಏನು : ನಿಜ ಹೇಳಬೇಕಂದ್ರೆ ನನಗೆ ಓದಲು ಪುರುಸೊತ್ತೇ ಇಲ್ಲ. ಸದ್ಯ ನನಗೆ 21 ವರ್ಷ ಬಿ.ಕಾಮ್ ಮಾಡ್ತಾ ಇದ್ದೇನೆ. ಕಾರ್ಯಕ್ರಮಕ್ಕೆ ತಯಾರಿ ಮಾಡೋದ್ರಲ್ಲೇ ಸಮಯವೆಲ್ಲಾ ಕಳೆದು ಹೋಗುತ್ತದೆ. ಕೆಲವು ಬಾರಿ ನನ್ನ ಪರೀಕ್ಷೆಗಳು ಯಾವಾಗ ಬರುತ್ತವೆ ಎಂಬುದೇ ನೆನಪಿರುವುದಿಲ್ಲ.

Advertisement

ಇಂಡಿಯನ್ ಐಡಲ್ ಟಾಪ್ ಟೆನ್ ನಲ್ಲಿ ಇದ್ದೀರಿ, ಹೇಗಿತ್ತು ಪಯಣ : ಇದೊಂದು ಕಷ್ಟ ಮತ್ತು ಸ್ಪರ್ಧೆಯ ಪಯಣ ಅಂತಾನೇ ಹೇಳಬೇಕು. ಈ ಕಾರ್ಯಕ್ರಮಕ್ಕೆ ದೇಶಾದ್ಯಂತ ಸುಮಾರು ಏಳು ಲಕ್ಷ ಜನ ಆಡಿಷನ್ ಕೊಟ್ಟಿದ್ರು. ಇದೆಲ್ಲವನ್ನೂ ಗೆದ್ದು ಇದೀಗ ಟಾಪ್ ಟೆನ್ ನಲ್ಲಿ ಬಂದು ನಿಂತಿದ್ದೇನೆ ಖುಷಿ ಅನ್ನಿಸ್ತಿದೆ.

ಈ ಸೀಸನ್ ಗೆಲ್ಲುವ ಕಾನ್ಫಿಡೆನ್ಸ್ ಇದೆಯಾ : ಖಂಡಿತ ಇದೆ. ಆದ್ರೆ ಮುಂದಿನ ದಿನಗಳಲ್ಲಿ ಯಾವೆಲ್ಲ ರೌಂಡ್ಸ್ ಬರುತ್ತೆ, ಯಾವ ಯಾವ ಟಾಸ್ಕ್ ಕೊಡ್ತಾರೆ ಅನ್ನೋದರ ಮೇಲೆ ನಿಂತಿದೆ. ಕಾನ್ಫಿಡೆನ್ಸ್ ಮಾತ್ರ 100ರಷ್ಟೂ ಇದೆ. ಮತ್ತು ಜನರು ನಮಗೆ ವೋಟ್ ಹಾಕೋದರ ಮೇಲೂ ನಮ್ಮ ಗೆಲುವು ನಿಂತಿದೆ.

ಕನ್ನಡಿಗರಿಗೆ ನಿಹಾಲ್ ಮನವಿ ಏನು: ನಾನು ಗೆಲ್ಲಲು ನಿಮ್ಮ ಸಹಕಾರ ತುಂಬಾ ಮುಖ್ಯ, ಅಲ್ಲದೆ ನಿಮ್ಮ ವೋಟ್ ಗಳು ತುಂಬಾ ಮುಖ್ಯವಾಗುತ್ತದೆ. ದಯಮಾಡಿ ನನಗೆ ವೋಟ್ ಮಾಡಿ. ನಾನು ಇಲ್ಲಿಯವರೆಗೆ ಬಂದಿರುವುದೇ ದೊಡ್ಡ ವಿಷಯ. ಇದೀಗ ನಾನು ಟಾಪ್ ಟೆನ್ ಸ್ಥಾನದಲ್ಲಿದ್ದೇನೆ. ನಿಮ್ಮ ಆಶೀರ್ವಾದ ಹೀಗೇ ಇರಲಿ.ನಿಮ್ಮ ಕನಸು ಸಾಕಾರವಾಗಲಿ ಎಂಬುದು ಉದಯವಾಣಿ ತಂಡದ ಶುಭಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next