Advertisement

Nice Road Kannada Movie: ನೈಸ್‌ ರೋಡ್‌ ಅಲ್ಲ,ನೈಟ್‌ ರೋಡ್‌!

05:11 PM Sep 18, 2024 | Team Udayavani |

“ನೈಸ್‌ ರೋಡ್‌’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ, ಟೈಟಲ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ “ನೈಟ್‌ ರೋಡ್‌’ ಎಂದು ಟೈಟಲ್‌ ಬದಲಿಸಿಕೊಂಡಿದೆ.

Advertisement

ಈ ಹಿಂದೆ ನೈಸ್‌ ರೋಡ್‌ ಎಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ನೈಸ್‌ ರೋಡ್‌ ಕಂಪೆನಿಯವರು ಸಿನಿಮಾ ಟೈಟಲ್‌ ಬದಲಿಸುವಂತೆ ನೋಟೀಸ್‌ ನೀಡಿದ್ದರು. ಸಿನಿಮಾ ತಂಡದವರು ಈ ಸಿನಿಮಾಗೂ ನೈಸ್‌ ರೋಡ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ಕೊನೆಗೆ

ಸಿನಿಮಾ ಟೈಟಲ್‌ ಬದಲಿಸಲು ನಿರ್ಧರಿಸಿ ಈಗ ನೈಟ್‌ ರೋಡ್‌ ಇಟ್ಟಿದ್ದಾರೆ.

ಈ ನೈಟ್‌ ರೋಡ್‌ ಚಿತ್ರವನ್ನು ಪುನರ್‌ ಗೀತಾ ಸಿನಿಮಾಸ್‌ ಎಂಬ ಬ್ಯಾನರಿನಲ್ಲಿ ಗೋಪಾಲ್‌ ಹಳೆಪಾಳ್ಯ ಅವರು ನಿರ್ಮಿಸಿ ತಾವೇ ನಿರ್ದೇಶನವನ್ನು ಮಾಡಿದ್ದಾರೆ. ಚಿತ್ರದಲ್ಲಿ ಧರ್ಮ, ಜ್ಯೋತಿ ರೈ, ಗಿರಿಜಾ ಲೋಕೇಶ್‌ ಗೋವಿಂದೇಗೌಡ ಈ ಚಿತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next