ಮುಂಬೈ: ಥಾಣೆ ಜಿಲ್ಲೆಯಲ್ಲಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮೆಫೆಡ್ರೋನ್ ಹೊಂದಿದ್ದ ಆರೋಪದ ಮೇಲೆ 35 ವರ್ಷದ ನೈಜೀರಿಯನ್ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗುರುವಾರ ಮೀರಾ ರೋಡ್ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಆರೋಪಿಯನ್ನು ಎಂಬಿವಿವಿ ಪೊಲೀಸರ ಆ್ಯಂಟಿ ನಾರ್ಕೋಟಿಕ್ ಸೆಲ್ ತಡೆಹಿಡಿದಿದೆ. ಪೊಲೀಸ್ ತಂಡವು ಆರೋಪಿಯಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ 503 ಗ್ರಾಂ ಮೆಫೆಡ್ರೋನ್ ಅನ್ನು ಪತ್ತೆ ಮಾಡಿದೆ. ಈ ವ್ಯಕ್ತಿ ನಲಸೊಪಾರಾದ ಪ್ರಗತಿ ನಗರ ಪ್ರದೇಶದ ನಿವಾಸಿಯಾಗಿದ್ದು, ಮುಂಬೈನ ವಿವಿಧ ಭಾಗಗಳಿಗೆ ಮತ್ತು ಅದರ ಪಕ್ಕದ ಪ್ರದೇಶಗಳಿಗೆ ಅಕ್ರಮ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಯರವಾಡ ಜೈಲಿನಲ್ಲಿದ್ದ ಆರೋಪಿ ಇತ್ತೀಚೆಗೆ ಇದೇ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದು, ಆತನ ಕೆಲವು ಸಹಚರರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಅಮರ್ ಮರಾಠೆ ತಿಳಿಸಿದ್ದಾರೆ.