ಮುಂಬಯಿ : ಜುಲೈ ತಿಂಗಳ ವಾಯಿದೆ ವಹಿವಾಟು (ಎಫ್ ಆ್ಯಂಡ್ ಓ) ಚುಕ್ತಾ ಗೊಳಿಸುವ ದಿನವಾದ ಇಂದು ಗುರುವಾರ ಭಾರೀ ಏರಿಳಿತಗಳನ್ನು ಕಂಡ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 0.84 ಅಂಕಗಳ ನಷ್ಟದೊಂದಿಗೆ 32,383.30 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 0.10 ಅಂಕಗಳ ನಷ್ಟಕ್ಕೆ ಗುರಿಯಾದರೂ ತಾನು ಸಂಪಾದಿಸಿದ್ದ ಪ್ರತಿಷ್ಠೆಯ ಐತಿಹಾಸಿಕ ದಾಖಲೆಯ 10,000 ಅಂಕಗಳ ಮಟ್ಟವನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 10,020.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಭಾರೀ ಏರಿಳಿತದ ವಹಿವಾಟಿಗೆ ಬಿಹಾರದಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ನಿರ್ಣಾಯಕ ಸಭೆ ಮುಖ್ಯ ಕಾರಣವೆನಿಸಿತು.
ಸೆನ್ಸೆಕ್ಸ್ ಇಂದು ವಹಿವಾಟಿನ ನಡುವೆ 290 ಅಂಕಗಳ ಏರಿಕೆಯನ್ನು ಕಂಡಿತಾದರೂ ದಿನಾಂತ್ಯಕ್ಕೆ ಅದೆಲ್ಲವನ್ನೂ ಬಿಟ್ಟುಕೊಟ್ಟದ್ದು ವಿಶೇಷವೆನಿಸಿತು.
ಇಂದು ಅತ್ಯಂತ ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಮಾರುತಿ ಸುಜುಕಿ, ಎಚ್ ಡಿ ಎಫ್ ಸಿ ಬ್ಯಾಂಕ್.
ಟಾಪ್ ಗೇನರ್‌ಗಳು : ಎಚ್ ಡಿ ಎಫ್ ಸಿ, ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಝೀ ಎಂಟರ್‌ಟೇನ್‌ಮೆಂಟ್; ಟಾಪ್ ಲೂಸರ್‌ಗಳು : ಡಾ.ರೆಡ್ಡಿ, ಟೆಕ್ ಮಹೀಂದ್ರ, ಟಾಟಾ ಮೋಟರ್ ಡಿವಿಆರ್, ಟಿಸಿಎಸ್, ಟಾಟಾ ಮೋಟರ್.