Advertisement

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 547 ಅಂಕ ಜಿಗಿತ; ಲಾಭಗಳಿಸಿದ ಎಸ್ ಬಿಐ, ಏಷಿಯನ್ ಪೇಂಟ್ಸ್ ಷೇರು

04:42 PM Jul 27, 2022 | Team Udayavani |

ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಮಿಶ್ರ ವಹಿವಾಟಿನ ಪರಿಣಾಮ ಬುಧವಾರ (ಜುಲೈ 27) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.

Advertisement

ಇದನ್ನೂ ಓದಿ:ತಮಿಳುನಾಡು: ಮತ್ತೊಬ್ಬ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ; 2 ವಾರಗಳಲ್ಲಿ 5ನೇ ಪ್ರಕರಣ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 547.83 ಅಂಕ ಏರಿಕೆಯಾಗಿದ್ದು, 55,816.32 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 158.00 ಅಂಕಗಳಷ್ಟು ಏರಿಕೆಯೊಂದಿಗೆ 16,641.80 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಸನ್ ಫಾರ್ಮಾ, ಎಸ್ ಬಿಐ, ಎಲ್ ಆ್ಯಂಡ್ ಟಿ, ಡೀವಿಸ್ ಲ್ಯಾಬ್ಸ್, ಏಷಿಯನ್ ಪೇಂಟ್ಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಬಜಾಜ್ ಆಟೋ, ಹೀರೋ ಮೋಟೊ ಕಾರ್ಪ್, ಯುಪಿಎಲ್, ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.

ಸಂವೇದಿ ಸೂಚ್ಯಂಕದ ಏರಿಕೆಯಿಂದಾಗಿ ಬ್ಯಾಂಕಿಂಗ್ ವಲಯ, ಐಟಿ, ಮೆಟಲ್, ತೈಲ ಮತ್ತು ಅನಿಲ್, ಪಿಎಸ್ ಯು ಬ್ಯಾಂಕ್, ಫಾರ್ಮಸಿ ಸೆಕ್ಟರ್ ಷೇರುಗಳು ಶೇ.1ರಿಂದ 2ರಷ್ಟು ಲಾಭಗಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next