Advertisement

ನಿಫಾ ವೈರಸ್‌: ಹಣ್ಣು  ಹಂಪಲು ಮಾರಾಟದಲ್ಲಿ ಕುಸಿತ

05:00 AM May 24, 2018 | Team Udayavani |

ಮಹಾನಗರ: ಕೇರಳದಲ್ಲಿ ನಿಫಾ ವೈರಸ್‌ ನಿಂದ 11 ಮಂದಿ ಸಾವನ್ನಪ್ಪಿದ್ದು, ರೋಗ ಹರಡುವ ಭೀತಿಯಿಂದ ನಗರದ ಜನರು ಆತಂಕಗೊಂಡಿದ್ದಾರೆ. ನಿಫಾ ವೈರಸ್‌ನಿಂದ ನಗರದ ಮಾರುಕಟ್ಟೆಗಳಲ್ಲಿ ಹಣ್ಣುಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಕಳೆದ ವಾರದಿಂದ ರಮ್ಜಾನ್‌ ಆರಂಭಗೊಂಡಿದ್ದರಿಂದ ಹಣ್ಣು  ಹಂಪಲುಗಳ ಬೆಲೆ ಏರಿಕೆಯಾಗಿತ್ತು. ಮುಸ್ಲಿಮರು ಉಪವಾಸ ಬಿಡುವ ಸಂದರ್ಭದಲ್ಲಿ ಹೆಚ್ಚಾಗಿ ಹಣ್ಣುಗಳನ್ನೇ ಬಳಸುವುದರಿಂದ ರಮ್ಜಾನ್‌ ತಿಂಗಳಲ್ಲಿ ಹಣ್ಣುಗಳ ಬೆಲೆ ಏರಿಕೆ ಕಾಣುತ್ತದೆ. ಅಂತೆಯೇ ಈ ಬಾರಿಯೂ ಏರಿಕೆ ಕಂಡಿತ್ತು. ಆದರೆ ಇದೀಗ ನಿಫಾ ವೈರಸ್‌ ಸುದ್ದಿ ಹರಡುತ್ತಿದ್ದಂತೆ ಹಣ್ಣುಗಳ ಮಾರಾಟದಲ್ಲಿ ಕುಸಿತವಾಗಿದೆ.

Advertisement

ವೈದ್ಯರು, ಅಧಿಕಾರಿಗಳು ಬಾವಲಿ, ಹಕ್ಕಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬೇಡಿ ಎಂದು ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಜನರು ಹಣ್ಣು ಸೇವನೆಯನ್ನೇ ಕಡಿಮೆ ಮಾಡುತ್ತಿದ್ದಾರೆ. ಮಾರುಕಟ್ಟೆಗಳಿಗೆ ಬರು ತ್ತಿರುವ ಹಣ್ಣುಗಳು ಎಲ್ಲಿಂದ ಬರುತ್ತವೆ. ಯಾವುದೇ ಮಾಹಿತಿ ಇಲ್ಲದಿರುವುದರಿಂದ ಜನರು ಹಣ್ಣುಗಳನ್ನು ಖರೀದಿಸುತ್ತಿಲ್ಲ.

ವ್ಯಾಪಾರದ ಮೇಲೆ ಪರಿಣಾಮ
ರಮ್ಜಾನ್‌ ಮಾಸವಾಗಿರುವುದರಿಂದ ಮುಸ್ಲಿಮರು ಹೆಚ್ಚಾಗಿ ಹಣ್ಣುಗಳನ್ನು ಖರೀದಿಸುತ್ತಿದ್ದರು. ಕಳೆದ ಮೂರು ದಿನ ಗಳ ಹಿಂದೆ ವ್ಯಾಪಾರ ಸರಿಯಾಗಿತ್ತು. ಆದರೆ ನಿಫಾ ವೈರಸ್‌ ಹಿನ್ನೆಲೆಯಲ್ಲಿ ಹಣ್ಣು ಖರೀದಿ ಸುವವರ ಸಂಖ್ಯೆ ಕಡಿಮೆಯಾಗಿದೆ. ಇದು ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ ಎಂದು ಹಣ್ಣಿನ ವ್ಯಾಪಾರಿ ಬಶೀರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next