Advertisement

ಗೋವಾಕ್ಕೆ ಕಾಲಿಟ್ಟ ನಿಫ‌?

06:00 AM May 29, 2018 | |

ತಿರುವನಂತಪುರ/ಪಣಜಿ: ಕೇರಳದಲ್ಲಿ 14 ಮಂದಿಯನ್ನು ಬಲಿ ಪಡೆದುಕೊಂಡ ನಿಪ ವೈರಸ್‌ ಇದೀಗ ಗೋವಾದಲ್ಲೂ ಭೀತಿಗೆ ಕಾರಣವಾಗಿದೆ. ಕೇರಳ ಮೂಲದ 20 ವರ್ಷದ ಯುವಕನೊಬ್ಬನಿಗೆ ನಿಪ ಸೋಂಕಿನ ಲಕ್ಷಣ ಕಂಡುಬಂದಿದ್ದು, ಆತನನ್ನು ತೀವ್ರ ನಿಗಾದಲ್ಲಿಡಲಾಗಿದೆ.

Advertisement

ಸದ್ಯ ಈತ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿಪ ಸೋಂಕು ತಗುಲಿರುವುದು ಇನ್ನೂ ದೃಢಪಟ್ಟಿಲ್ಲ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ತಿಳಿಸಿದ್ದಾರೆ. ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸೋಂಕಿನ ಕುರಿತು ನಿಖರ ಮಾಹಿತಿ ದೊರೆಯಲಿದೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದೂ ರಾಣೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next