Advertisement
ಹಣ್ಣು ಬಳಕೆ ಭೀತಿ ಇಲ್ಲನಿಫಾ ವೈರಸ್ ಹೊಂದಿರುವ ಬಾವಲಿ ಗಳು ಹಣ್ಣುಗಳನ್ನು ಕಚ್ಚಿದ್ದರೆ ಅವು ಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿರುವುದರಿಂದ ಜನರಲ್ಲಿ ಜಾಗೃತಿ ಮೂಡಿದೆ. ಹಣ್ಣುಗಳ ಮಾರಾಟದಲ್ಲಿ ಇಳಿಕೆಯಾಗಿಲ್ಲ ಎಂದು ಉಡುಪಿಯ ಹಣ್ಣು ಹಂಪಲುಗಳ ಅಂಗಡಿ ಮಾಲಕರು ತಿಳಿಸಿದ್ದಾರೆ.
ಕುಂದಾಪುರ: ಅತಿಹೆಚ್ಚು ಕೇರಳೀಯ ಭಕ್ತರು ಆಗಮಿಸುವ ಕೊಲ್ಲೂರಿನಲ್ಲಿಯೂ ನಿಫಾ ವೈರಸ್ ಸೋಂಕಿನ ಕುರಿತು ನಿಗಾ ಹರಿಸುವ ಅಗತ್ಯವಿದೆ. ಆದರೆ ಪ್ರಯಾಣ ಕಷ್ಟವಿರುವ, ತೀವ್ರ ಪ್ರಮಾಣದ ಜ್ವರ ಪೀಡಿತರಲ್ಲಿ ಮಾತ್ರ ನಿಫಾ ಸೋಂಕು ಇರುವ ಕಾರಣ ಸಾಮಾನ್ಯರು ಭೀತಿ ಪಡುವ ಅಗತ್ಯವಿಲ್ಲ. ಆದರೂ ಜ್ವರ ಪೀಡಿತರ ಕುರಿತು ನಿಗಾ ವಹಿಸುವಂತೆ ಸೂಚಿಸಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರೋಹಿಣಿ ಹೇಳಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕರ್ನಾಟಕದ ನಾನಾ ಭಾಗವಷ್ಟೇ ಅಲ್ಲದೆ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯ ಗಳಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕೊಲ್ಲೂರಿಗೆ ಆಗಮಿಸುವ ಕೇರಳ ರಾಜ್ಯವಾಸಿಗಳು ಕೊಂಕಣ ರೈಲ್ವೇ ಯನ್ನು ಆಶ್ರಯಿಸಿದ್ದು ಮಂಗಳೂರಿ ನಿಂದ ಬೈಂದೂರು ರೈಲು ನಿಲ್ದಾಣಕ್ಕೆ ಬರುತ್ತಾರೆ. ಆದ್ದರಿಂದ ಬೈಂದೂರು ನಿಲ್ದಾಣದಲ್ಲಿ ಕೂಡ ಕಟ್ಟೆಚ್ಚರ ವಹಿಸುವ ಅಗತ್ಯವಿದೆ ಎಂದು ಡಾ| ರೋಹಿಣಿ ಹೇಳಿದ್ದಾರೆ.