Advertisement

ನಿಪ ಭೀತಿ ಹೆಚ್ಚಿಸಿದ ಬಾವಲಿಗಳು

05:48 PM May 28, 2018 | Team Udayavani |

ಚಿಕ್ಕೋಡಿ: ನಿಪ ವೈರಾಣು ಭೀತಿ ಹಿನ್ನೆಲೆಯಲ್ಲಿ ಪಟ್ಟಣದ ಅಂಚೆ ಕಚೇರಿ, ನ್ಯಾಯಾಲಯ ಆವರಣ ಸೇರಿದಂತೆ ಕೆಲ ಕಡೆಗಳಲ್ಲಿ ಬಾವಲಿಗಳಿದ್ದು, ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿದೆ.

Advertisement

ಬಾವಲಿಗಳನ್ನು ಸ್ಥಳಾಂತರಿಸಬೇಕು ಇಲ್ಲವೇ ಅಲ್ಲಿಯ ನಿವಾಸಿಗಳಿಗೆ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕಾಗಿದೆ. ಪಟ್ಟಣದ ಬಸವ ಸರ್ಕಲ್‌ ಜನನಿಬೀಡ ಪ್ರದೇಶ. ನ್ಯಾಯಾಲಯ ಸಂಕೀರ್ಣ, ಅಂಚೆ ಕಚೇರಿ, ಲೋಕೋಪಯೋಗಿ, ನೀರಾವರಿ ಇಲಾಖೆ ಕಚೇರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಈ ಪ್ರದೇಶದಲ್ಲಿವೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಹಿರಿಯ ಅ ಧಿಕಾರಿಗಳ ಸಭೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ಜನಜಾಗೃತಿ ಮೂಡಿಸುವ ಕುರಿತು ತರಬೇತಿ ನೀಡಲಾಗಿದೆ. ಸದ್ಯ ಮಾವು, ಹಲಸಿನ ಹಣ್ಣಿನ ಸೀಜನ್‌ ಇದ್ದು, ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು ಎಂಬ ಜನಜಾಗೃತಿ ನಿರಂತರವಾಗಿದೆ.

ಹಂದಿ,ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರುಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಿ. ಶಂಕಿತ ಮನುಷ್ಯ ಪ್ರಕರಣಗಳನ್ನು ಪ್ರತ್ಯೇಕವಾಗಿಡಿ. ರೋಗಿಗಳು ಬಳಸುವ ವಸ್ತಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸತಕ್ಕದ್ದು, ಹಸ್ತಲಾಘವ ಕೊಡುವುದನ್ನು ತಪ್ಪಿಸಿ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು
ಸರಿಯಾಗಿ ತೊಳೆದುಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್‌ ತಪ್ಪದೇ ಬಳಸುವುದು. ಎಲ್ಲ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಮತ್ತು ಅಥವಾ ಬೇಯಿಸಿ ತಿನ್ನುವುದು, ರೋಗ ಲಕ್ಷಣಗಳು ಕಂಡು ಬಂದರೆ ಹತ್ತಿರ ಆಸ್ಪತ್ರೆಗೆ ಭೇಟಿ ನೀಡುವುದು ಮತ್ತು ನೆರವಿಗಾಗಿ 104ಕ್ಕೆ ಕರೆ ಮಾಡಬೇಕು.

ಸೋಂಕಿತ ಪ್ರದೇಶಕ್ಕೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯ ಕೈಗೊಳ್ಳುವುದು. ರೋಗಿಯ ಶರೀರ ಸ್ರಾವದೊಂದಿಗೆ ಸಂರ್ಪಕ ತಪ್ಪಿಸಿ ಎಂಬ ಭಿತ್ತಿ ಪತ್ರಗಳನ್ನು ಆರೋಗ್ಯ ಇಲಾಖೆ ಹೊರಡಿಸಿದೆ.

Advertisement

ಪಟ್ಟಣದ ಕೆಸಿ ರಸ್ತೆಯಲ್ಲಿರುವ ಗಿಡಗಳಲ್ಲಿ ಬಾವಲಿಗಳು ಹೆಚ್ಚಾಗಿ ವಾಸಿಸುತ್ತವೆ. ಇಲ್ಲಿ ತೆರೆದ ತಿಂಡಿ ತಿನಿಸು ತಂಪು ಪಾನೀಯಗಳ ಬಗ್ಗೆ ಜಾಗೃತಿ ವಹಿಸುವುದು ಅವಶ್ಯಕವಾಗಿದೆ. ರೋಗದ ಬಗ್ಗೆ ಬಿತ್ತಿ ಪತ್ರ ಜಾಗೃತಿ ಕಾರ್ಯಕ್ರಮ ನಡೆಸುವ ಅಗತ್ಯವಿದೆ.  
ಚಂದ್ರಕಾಂತ ಹುಕ್ಕೇರಿ,
ಸಾಮಾಜಿಕ ಹೋರಾಟಗಾರ

ಚಿಕ್ಕೋಡಿ ಬಾವಲಿಗಳು ಅಥವಾ ಇತರೆ ಪ್ರಾಣಿ ಪಕ್ಷಿಗಳಿಗೆ ಹಿಂಸೆ ನೀಡುವುದು ಕಾನೂನುಬಾಹಿರ. ಹೀಗಾಗಿ ಜನನಿಬೀಡ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಂತಹ ಸ್ಥಳದಲ್ಲಿ ಸೋಂಕಿನ ಜಾಗೃತಿ ಮೂಡಿಸುವ ಕಾರ್ಯ ಆರೋಗ್ಯ ಇಲಾಖೆ ಮಾಡುತ್ತಿದೆ.  
ಡಾ| ಎಸ್‌.ವಿ. ಮುನ್ಯಾಳ,
ಎಡಿಎಚ್‌ಒ ಚಿಕ್ಕೋಡಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next